Slide
Slide
Slide
previous arrow
next arrow

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಅರ್ಜಿಆಹ್ವಾನ

300x250 AD

ಕಾರವಾರ: ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನುಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮೇಜರ್‌ ಧ್ಯಾನಚಂದ್‌ ಖೇಲ್‌ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನಚಂದ್‌ ಜೀವಮಾನ ಪ್ರಶಸ್ತಿ, ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪುರಸ್ಕಾರ ಮತ್ತು ಮೌಲಾನಾಅಬುಲ್ ಕಲಾಂ ಆಜಾದ್ ಟ್ರೋಫಿಗಳನ್ನು ಕ್ರೀಡಾ ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಘಟಕಗಳು ಮತ್ತು ವಿಶ್ವವಿದ್ಯಾಲಯಗಳಿಗೆ ನೀಡಲಾಗುತ್ತಿದೆ.

ಅರ್ಹ ಕ್ರೀಡಾಪಟುಗಳಿಂದ 2023 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗಾಗಿ ಸಚಿವಾಲಯವು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. 04 ಅಕ್ಟೋಬರ್ 2023 ರಂದು ಮೀಸಲಾದ ಆನ್‌ಲೈನ್ ಪೋರ್ಟಲ್‌ http://dbtyas-sports.gov.in ನಲ್ಲಿ ತರಬೇತುದಾರರು ಮತ್ತು ಘಟಕಗಳು ಮತ್ತು ವಿಶ್ವವಿದ್ಯಾನಿಲಯಗಳು ಪ್ರಶಸ್ತಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅರ್ಹರಾಗಿರುವ ಕ್ರೀಡಾಪಟುಗಳು, ತರಬೇತುದಾರರು ಮತ್ತು ಘಟಕಗಳು ಅಧಿಕಾರಿಗಳ ಶಿಫಾರಸ್ಸುಗಳಿಲ್ಲದೇ ಸ್ವಯಂ-ಅರ್ಜಿ ಸಲ್ಲಿಸಲು ಅನುಮತಿಸಲಾಗಿದ್ದು, ಆನ್‌ಲೈನ್ ಪೋರ್ಟಲ್‌ http://dbtyas-sports.gov.in ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ನವೆಂಬರ್ 2023 ಆಗಿರುತ್ತದೆ. ಆನ್‌ಲೈನ್‌ ಅರ್ಜಿಯೊಂದಿಗೆ ಉದ್ಯೋಗದಾತರಿ0ದ ವಿಜಿಲೆನ್ಸ್ ಪ್ರಮಾಣ ಪತ್ರವನ್ನು ಸಲ್ಲಿಸುವುದು (ಕೇಂದ್ರ/ರಾಜ್ಯ ಸರ್ಕಾರದPSU ಸಂಸ್ಥೆಯ ಸಂದರ್ಭದಲ್ಲಿ) ಕಡ್ಡಾಯವಾಗಿದೆ.

ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ, ಅರ್ಜಿದಾರರು ಕ್ರೀಡಾ ಇಲಾಖೆಯ sportsawards-moyas@gov.in ಹಾಗೂ ದೂರವಾಣಿಸಂಖ್ಯೆ: tel:+9101123387432 ಬೆಳಿಗ್ಗೆ 9ರಿಂದ ಸಂಜೆ 5.30 ರವರೆಗೆ, ಅಲ್ಲದೇ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗಳು tel:+9118002025155 ಮತ್ತು tel:+9118002585155 ಕ್ಕೆ ಸಂಪರ್ಕಿಸಬಹುದಾಗಿರುತ್ತದೆ.

300x250 AD

ಹೆಚ್ಚಿನ ಮಾಹಿತಿಗಾಗಿಕಚೇರಿದೂರವಾಣಿ ಸಂಖ್ಯೆ: tel:+9108382201824 ಹಾಗೂ ಮೊಬೈಲ್ ಸಂಖ್ಯೆ: tel:+919480886551 ಕ್ಕೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top