Slide
Slide
Slide
previous arrow
next arrow

ಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ

300x250 AD

▶️ ಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ

▶️ ಕ್ಯಾನ್ಸರ್ ಪೀಡಿತ ಪತಿಯ ಉಳಿವಿಗೆ ಲಿವರ್ ದಾನ ಮಾಡಲು ಮುಂದಾದ ಪತ್ನಿ

▶️ ಬಾಳೆಗದ್ದೆ ವಿನಯ ಕುಟುಂಬಕ್ಕೆ ಧನ ಸಹಾಯ ನಮ್ಮಿಂದಿರಲಿ

e – ಉತ್ತರ ಕನ್ನಡ ಕಾಳಜಿಯ ವರದಿ:

ನಾಳೆ ನಮ್ಮ ಬದುಕು ಹೀಗೆಯೇ ಆಗುತ್ತದೆ ಎಂದು ಊಹಿಸುವುದು ಯಾರಿಗೂ ಸಾಧ್ಯವಿಲ್ಲ. ಇಂದು ಆರೋಗ್ಯದಿಂದ ಇದ್ದವರು ಅರೆಕ್ಷಣದಲ್ಲಿ ನಮ್ಮನ್ನು ಅಗಲಿದ ಸಾಕಷ್ಟು ದುರ್ಘಟನೆಗಳು ನಮ್ಮ ಕಣ್ಣಮುಂದಿದೆ. ಇರುವಷ್ಟು ದಿನ ನಮ್ಮ ಕೈಲಾದಷ್ಟು ಇತರರಿಗೆ ಒಳಿತನ್ನು ಮಾಡುವ ಮೂಲಕ ಬದುಕನ್ನು ಚಂದವಾಗಿಸಿಕೊAಡರೆ ನಮ್ಮ ಜೀವನ ಸಾರ್ಥಕ. ನಾವು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಕಿಂಚಿತ್ತಾದರೂ ನೀಡಿದಾಗ ಮನದಲ್ಲೇನೋ ಸಾರ್ಥಕಭಾವ. ಅಂತಹ ಅಪೂರ್ವ ಅವಕಾಶ ಈಗ ನಮ್ಮೆಲ್ಲರ ಮುಂದಿದೆ. ಅದರ ಅವಶ್ಯಕತೆ, ಅನಿವಾರ್ಯತೆಯೂ ಇದೆ.

ಹೌದು, ಇಂಜಿನಿಯರ್ ಕೆಲಸದ ಜೊತೆಗೆ ಕೃಷಿ ನಡೆಸಿಕೊಂಡು ಸುಂದರ ಸಂಸಾರ ನಡೆಸುತ್ತಿದ್ದ ಶಿರಸಿ ತಾಲೂಕಿನ ಕೆಂಗ್ರೆ ಬಾಳೆಗದ್ದೆಯ ವಿನಯ ವಿಶ್ವನಾಥ ಹೆಗಡೆ ಇದೀಗ ಆಸ್ಪತ್ರೆಯ ಹಾಸಿಗೆ ಮೇಲೆ ಜೀವದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. 43 ರ ಪ್ರಾಯದ ವಿನಯ ಬಾಳೆಗದ್ದೆ ಇವರು ಕಳೆದ ಕೆಲ ವರ್ಷಗಳಿಂದ ಲಿವರ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇದೀಗ ಲಿವರ್‌ಟ್ರಾನ್ಸ್ಪ್ಲಾಂಟ್ (ಯಕೃತ್ತಿನ ಕಸಿ) ಮಾಡಿಸುವ ನಿಮಿತ್ತ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತನ್ನ ಗಂಡನ ಜೀವದ ಉಳಿವಿಗೆ ಪತ್ನಿ ಕೋಕಿಲಾ ಹೆಗಡೆ ಸ್ವತಃ ತನ್ನ ಲಿವರ್ ಭಾಗವನ್ನು ನೀಡಲು ಮುಂದಾಗಿದ್ದು, ಇದು ಯಶಸ್ವಿಯಾದಲ್ಲಿ ಗಂಡನ ಪಾಲಿಗೆ ಸಂಜೀವಿನಿಯಾಗಲಿದ್ದಾರೆ. ಈ ಚಿಕಿತ್ಸೆಯು ಯಶಸ್ವಿಯಾಗಲೆಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

▶️ ಜೀವ ಉಳಿಸಲು ಬೇಕಿದೆ ರೂ.25 ಲಕ್ಷ
ಇದೀಗ ಜೀವದ ಉಳಿವಿಗಾಗಿ ಹೋರಾಟ ಮಾಡುತ್ತಿರುವ ವಿನಯ ಬಾಳೆಗದ್ದೆಯವರ ಯಕೃತ್ತಿನ ಕಸಿ ಮಾಡಲು ಅಂದಾಜು ರೂ. 25 ಲಕ್ಷಗಳಷ್ಟು ಹಣಕಾಸಿನ ಅವಶ್ಯಕತೆ ಇರುವುದಾಗಿ ಮಣಿಪಾಲ ಆಸ್ಪತ್ರೆ ತಿಳಿಸಿದೆ. ಈ ಮೊದಲೇ ಕ್ಯಾನ್ಸರ್ ಚಿಕಿತ್ಸೆಗಾಗಿ ಸಾಕಷ್ಟು ಹಣ ನೀರಿನಂತೆ ವ್ಯಯಿಸಿರುವ ಈ ಕುಟುಂಬಕ್ಕೆ ಇದೀಗ ಸಮಾಜವೇ ಅಗ್ರೇಸರನಾಗಿ ನಿಂತು, ಧೈರ್ಯ ಹೇಳುವುದರ ಜೊತೆಗೆ ನಮ್ಮ ಕೈಲಾದಷ್ಟು ಹಣದ ಸಹಾಯ ಮಾಡುವ ಅನಿವಾರ್ಯತೆ ನಮ್ಮೆದುರಿದೆ.

▶️ ವಿನಯ ಕುಟುಂಬಕ್ಕೆ ನಮ್ಮ ಸಹಾಯ ಹಸ್ತ ಚಾಚೋಣ
ಈಗಾಗಲೇ ಕುಟುಂಬದವರು, ಹತ್ತಿರದ ಸಂಬಂಧಿಗಳು, ಹಿತೈಷಿಗಳು ಸೇರಿದಂತೆ ಸಾಕಷ್ಟು ಜನರು ತಮ್ಮ ಕೈಲಾಗುತ್ತಿರುವ ಕಿರು ಸಹಾಯದ ಮೂಲಕ ವಿನಯ ಹೆಗಡೆ ಬದುಕಿನ ಹೋರಾಟಕ್ಕೆ ಹೆಗಲು ನೀಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಇಂದಿನ ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು 550 ಕ್ಕೂ ಹೆಚ್ಚಿನ ದಾನಿಗಳ ನೆರವಿನಿಂದ ‘ಮಿಲಾಪ್’ ಕ್ರೌಡ್ ಫಂಡಿಂಗ್ ವೇದಿಕೆಯಲ್ಲಿ ಸುಮಾರು 9 ಲಕ್ಷಗಳಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ದೊರೆತಿದೆ. ಆದರೆ ಒಮ್ಮೆ ಆಸ್ಪತ್ರೆ ಸೇರಿದರೆ ನೀರಿನಂತೆ ಖಾಲಿಯಾಗುವ ಹಣ ಎಷ್ಟಿದ್ದರೂ ಸಾಕಾಗದು.

300x250 AD

ಬದುಕಿನಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಇನ್ನೊಬ್ಬರ ಕಷ್ಟಕ್ಕೆ ನಾವು ಹೇಗೆ ಸ್ಪಂದಿಸಿದ್ದೇವೆ ಎಂಬುದರ ಮೇಲೆ ನಮ್ಮ ಬದುಕು ತೀರ್ಮಾನವಾಗುತ್ತದೆ ಎಂಬ ನಂಬಿಕೆ ನಮ್ಮದು. ಈ ಹಿನ್ನಲೆಯಲ್ಲಿ ನಮ್ಮದೇ ಸುತ್ತಲಿನ, ನಮ್ಮ ಜಿಲ್ಲೆಯ ವ್ಯಕ್ತಿಯೊಬ್ಬರು ಹೊರ ಊರಿನ ಆಸ್ಪತ್ರೆಯ ಹಾಸಿಗೆಯಲ್ಲಿ ಜೀವದ ಉಳಿವಿಗಾಗಿ ಹೋರಾಟ ಮಾಡುತ್ತಿರುವಾಗ ನಾವೇ ಸ್ಪಂದಿಸದಿದ್ದರೆ ಅದು ಮನುಷ್ಯತ್ವ ಎನಿಸದು. ಸಣ್ಣದಾದರೂ ಸರಿ. ನಮ್ಮ ಕೈಲಾದಷ್ಟು ಹಣದ ಸಹಾಯ ವಿನಯ ಕುಟುಂಬಕ್ಕೆ ಮಾಡೋಣ. ಆ ಮೂಲಕ ಸಮಾಜದ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳೋಣ.

▶️ ಓದುಗ ದಾನಿಗಳ ಹೆಸರು ಅಭಿಮಾನದಿಂದ ಪ್ರಕಟಣೆ
ಈ ವರದಿ ಓದಿದ ಪ್ರತಿಯೊಬ್ಬರೂ ಸಹ ತಪ್ಪದೇ ವಿನಯ ಬಾಳೆಗದ್ದೆಯವರ ಬದುಕಿನ ಹೋರಾಟಕ್ಕೆ ಹೆಗಲು ನೀಡುತ್ತೀರಿ ಎಂಬ ಭರವಸೆ ನಮಗಿದೆ. ನಮ್ಮವರ ಜೊತೆ ನಾವಿರೋಣ. ನೊಂದವರ ಬದುಕನ್ನು ಚಂದವಾಗಿಸೋಣ.ಇತರರ ಒಳ್ಳೆಯ ಕೆಲಸ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕೆಂಬುದು ನಮ್ಮ ಎಂದಿನ ಉದ್ಧೇಶ. ಹಾಗಾಗಿ ” e – ಉತ್ತರ ಕನ್ನಡ”ದ ಓದುಗರು ತಾವು ವಿನಯ ಕುಟುಂಬಕ್ಕೆ ನೀಡಿದ ಹಣದ ಮಾಹಿತಿ ಮತ್ತು ನಿಮ್ಮ ಹೆಸರನ್ನು Tel:+918762230888 ಸಂಖ್ಯೆಗೆ ವಾಟ್ಸಪ್ ಮಾಡಿದರೆ, ಅದನ್ನು ನಾವು ಗೌರವಿಸಿ ನಮ್ಮ ಪತ್ರಿಕೆಯಲ್ಲಿ ಹೆಮ್ಮೆಯ ಓದುಗರೆಂದು ಅಭಿಮಾನದಿಂದ ಪ್ರಕಟಿಸುತ್ತೇವೆ. ನೀವೂ ಸಹಾಯ ಮಾಡಿ, ಸಹಾಯ ಮಾಡಲು ಇನ್ನೊಬ್ಬರನ್ನೂ ಪ್ರೇರೇಪಿಸಿ.

▶️▶️ ಈ ಲಿಂಕ್ ಒತ್ತುವ ಮೂಲಕ ಹಣವನ್ನು ಮಿಲಾಪ್ ಬಳಸಿ ವಿನಯ ಕುಟುಂಬಕ್ಕೆ ನೆರವಾಗಬಹುದು. https://shorturl.at/bqGV2

ಕೋಕಿಲಾ ವಿನಯ ಅವರ ಬ್ಯಾಂಕ್ ವಿವರ ಈ ಕೆಳಗಿನಂತಿದೆ.

Name: Kokila V Hegde (Wife of Vinay V Hegde)
Bank: Bank of Baroda
Branch Name: APMC YARD SIRSI
Branch Address: TSS Building, APMC Yard, Sirsi, Karnataka, India
Account Number: 64480100002906
IFSC Code: BARBOVJAPMC [ fifth character is zero]
MICR Code: FN6V01626
UPI ID : kokilahegde-1@oksbi

`e – ಉತ್ತರ ಕನ್ನಡ’ದ ಕಳಕಳಿ:
ಸುಮಾರು 50,000 ಕ್ಕೂ ಅಧಿಕ ಓದುಗರನ್ನು ಪ್ರತಿನಿತ್ಯ ತಲುಪುತ್ತಿರುವ ” e – ಉತ್ತರ ಕನ್ನಡ” ಇದೀಗ ವಿನಯ ಬಾಳೆಗದ್ದೆಯವರ ಬದುಕಿನ ಹೋರಾಟಕ್ಕೆ ಸಣ್ಣದಾಗಿ ಸಹಕಾರಿಯಾಗುವ ಅಭಿಲಾಷೆ ಹೊಂದಿದೆ. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನ ನಮ್ಮಿಂದಲೇ ಆರಂಭಿಸಿ,
” e – ಉತ್ತರ ಕನ್ನಡ” ಸಂಸ್ಥೆ ವತಿಯಿಂದ ಈಗಾಗಲೇ ಅವರ ಪತ್ನಿಯ ಅಕೌಂಟ್‌ಗೆ ಕಿಂಚಿತ್ ಧನ ಸಹಾಯ ಮಾಡಲಾಗಿದೆ. ನಮ್ಮೆಲ್ಲ ಓದುಗ ಪ್ರತಿಯೊಬ್ಬರೂ ಇಲ್ಲಿ ನೀಡಲಾದ ಬ್ಯಾಂಕ್ ವಿವರಕ್ಕೆ ಅಥವಾ ಯುಪಿಐ ಬಳಸಿ ಕನಿಷ್ಟ 100 ರೂಪಾಯಿಯನ್ನಾದರೂ ನೀಡಬೇಕೆಂಬುದು ನಮ್ಮ ಹೆಬ್ಬಯಕೆ.

  • ಟೀಮ್ e – ಉತ್ತರ ಕನ್ನಡ
Share This
300x250 AD
300x250 AD
300x250 AD
Back to top