ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯವರು ನಡೆಸಿದ ‘ಸಮಯ ವ್ಯರ್ಥವಾದರೆ ಜೀವನ ವ್ಯರ್ಥ’ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಸಾಕ್ಷಿ. ಕೆ.ಎಸ್. (ಇಂಗ್ಲೀಷ್ ಭಾಷೆಯಲ್ಲಿ) ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಪಾವನಿ ಎಸ್. ನಾಯ್ಕ (ಕನ್ನಡ ಭಾಷೆಯಲ್ಲಿ) ಬರೆದ
ಪ್ರಬಂಧದಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ, ಸಾಧನೆಗೈದಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಮುಖ್ಯಾಧ್ಯಾಪಕರು, ಸಲಹೆಗಾರರು, ಶಿಕ್ಷಕ ವೃಂದದವರು ಅಭಿನಂದಿಸಿ, ಹಾರೈಸಿದ್ದಾರೆ.