Slide
Slide
Slide
previous arrow
next arrow

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಜನರಿಗೆ ಅತ್ಯಗತ್ಯ: ಅನಂತಮೂರ್ತಿ ಹೆಗಡೆ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಶೀಘ್ರವಾಗಿ ನಿರ್ಮಾಣ ಆಗಬೇಕು ಹಾಗೂ ಎರಡು ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು. ಇದು ಜಿಲ್ಲೆಯ ಪ್ರತಿಯೊಬ್ಬ ಜನರಿಗೂ ಅಗತ್ಯವಾಗಿದೆ. ಅದಕ್ಕಾಗಿಯೇ ನಾವು ನಿಮ್ಮ ಪರವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ತಮ್ಮ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆಯ ಎರಡನೇ ದಿನವಾದ ಇಂದು ಮಾರ್ಗ ಮಧ್ಯ ರಾಗಿಹೊಸಳ್ಳಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಕೊರತೆ ಇದೆ. ವೈದ್ಯರ ಕೊರತೆ ಇದ್ದು ಹೃದಯಾಘಾತ, ಅಪಘಾತವಾದಾಗ ತಕ್ಷಣದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ಜನರ ಪ್ರಾಣ ಹೋಗಿದೆ. ಹೀಗಾಗಿ ಶೀಘ್ರ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದರು.

ಹೀಗಾಗಿ ನಾವು ಪಾದಯಾತ್ರೆ ಮೂಲಕ ಹೋರಾಟ ಪ್ರಾರಂಭಿಸಿದ್ದೇವೆ. ನಿನ್ನೆ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಚಾಲನೆಗೊಂಡ ನಮ್ಮ ಪಾದಯಾತ್ರೆ ಇಂದು ರಾಗಿಹೊಸಳ್ಳಿ ಮಾರ್ಗವಾಗಿ ದೇವಿಮನೆವರೆಗೆ ತಲುಪಲಿದ್ದೇವೆ. ಮಾರ್ಗ ಮಧ್ಯ ಸ್ಥಳೀಯ ಜನರ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು, ಅನೇಕರು ನಮ್ಮ ಪಾದಯಾತ್ರೆಗೆ ಕೈಜೋಡಿಸಿ ತಾವು ಕೂಡ ಜೊತೆಯಾಗುತ್ತಿದ್ದಾರೆ ಎಂದರು.

300x250 AD

ನಾಳೆ ನಾವು ದೇವಿಮನೆಯಿಂದ ಕುಮಟಾ ತಾಲೂಕನ್ನು ಪ್ರವೇಶಿಸುತ್ತಿದ್ದು, ಈಗಾಗಲೇ ಅಲ್ಲಿಯ ಸ್ಥಳೀಯರು ದೂರವಾಣಿ‌ ಮೂಲಕ ಪಾದಯಾತ್ರೆಗೆ ಕೈಜೋಡಿಸುವುದಾಗಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ಹೋರಾಟದ ಬಲ ಹೆಚ್ಚಾಗುತ್ತಲಿದೆ. ಇದು ನಮಗೆ ಇನ್ನೂ ಹೋರಾಟದ ಮನೋಭಾವ ಹೆಚ್ಚಿಸುತ್ತದೆ. ರವಿವಾರ ಬೆಳಿಗ್ಗೆ ಕುಮಟಾ ನಗರವನ್ನು ನಮ್ಮ ಪಾದಯಾತ್ರೆ ತಲಿಪಲಿದ್ದು, ನಗರದ ಬಸ್ ನಿಲ್ದಾಣದ ಮುಂಬಾಗ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಹೀಗೆ ಸಾಗಿದ ಪಾದಯಾತ್ರೆಯು ನ. 9 ರಂದು ಕಾರವಾರ ತಲುಪಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.

Share This
300x250 AD
300x250 AD
300x250 AD
Back to top