Slide
Slide
Slide
previous arrow
next arrow

ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ : 2 ನೇ ದಿನ ಕೊಳಗಿಬೀಸ್‌ನಿಂದ ಆರಂಭ

300x250 AD

ಶಿರಸಿ: ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡ ಪಾದಯಾತ್ರೆಯು ಶುಕ್ರವಾರ ಶಿರಸಿಯಲ್ಲಿ ಚಾಲನೆಗೊಂಡಿದ್ದು, ಇಂದು ಕೋಳಗಿಬೀಸ್‌ನಿಂದ ದೇವಿಮನೆಘಟ್ಟದವರೆಗೆ ಪಾದಯಾತ್ರೆ ಸಾಗಲಿದ್ದು, ಅನೇಕರು ಭಾಗಿಯಾಗಿದ್ದಾರೆ.

ಈ ಬಗ್ಗೆ ಅಮ್ಮಿನಳ್ಳಿಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿ, ನಿನ್ನೆಯಿಂದ ಆರಂಭಗೊಂಡ ಈ ಪಾದಯಾತ್ರೆಯು ರಾತ್ರಿ ಕೊಳಗಿಬೀಸ್‌ನಲ್ಲಿ ವಾಸ್ತ್ಯವ್ಯ ಹೂಡಿತ್ತು. ಇಂದು ಮುಂಜಾನೆ ಪುನಃ ಪಾದಯಾತ್ರೆ ಮುಂದುವರೆದಿದೆ. ಇದು ಯಾವುದೇ ಸಮುದಾಯ, ಪಕ್ಷ ಹಾಗೂ ಜಾತಿಗೆ ಸಂಬಂಧಿಸಿದ ಪಾದಯಾತ್ರೆಯಲ್ಲದೇ, ಉತ್ತರಕನ್ನಡ ಜಿಲ್ಲೆಯ ಜನರ ಸ್ವಾಭಿಮಾನದ ಪಾದಯಾತ್ರೆಯಾಗಿದೆ. ಈ ಪಾದಯಾತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯ ಜನರು ಭಾಗಿಯಾಗಬೇಕು ಎಂದರು.

300x250 AD

ಈ ಪಾದಯಾತ್ರೆಯಲ್ಲಿ ಅನೇಕ ಗಣ್ಯರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top