ಶಿರಸಿ: ಉತ್ತರ ಕನ್ನಡದ ಮೂಲದ ಇಬ್ಬರು ಸಾಧಕರಿಗೆ ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭರತನಾಟ್ಯ ಕ್ಷೇತ್ರದಲ್ಲಿ ಅನವರತ ಸಾಧನೆ ಮಾಡಿದ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದೂಷಿ ಸಹನಾ ಪ್ರದೀಪ ಭಟ್ಟ ಹಾಗೂ ಹಿರಿಯ ಪತ್ರಕರ್ತೆ, ಕ್ಯಾನ್ಸರ್ ಕುರಿತು ನೊಂದವರಿಗೆ ಆಪ್ತ ಸಮಾಲೋಚನೆ ಮಾಡುತ್ತಿರುವ ಕೃಷ್ಣಿ ಶಿರೂರ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಈ ಇಬ್ಬರೂ ಸಿದ್ದಾಪುರ ತಾಲೂಕಿನ ಮೂಲದವರಾಗಿದ್ದು, ಸಹನಾ ಭಟ್ಟ ಶಿರಸಿಯಲ್ಲಿ ಕೂಡ ನೃತ್ಯ ತರಬೇತಿ ಕೇಂದ್ರ ನಡೆಸುತ್ತಿದ್ದು, ಕೃಷ್ಣಿ ಶಿರಸಿಯಲ್ಲಿ ವರದಿಗಾರರಾಗಿದ್ದರು. ಕೃಷ್ಣಿ ಪ್ರಸ್ತುತ ಧಾರವಾಡದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.