ಕಾರವಾರ: ಫೆಬ್ರವರಿ 26 ರ ಶಿವರಾತ್ರಿ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ಕನ್ನಡ ವಿಭಾಗ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ವಾಕರಸಾಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ.
ಶಿರಸಿ ಹಳೆ ಬಸ್ ನಿಲ್ದಾಣದಿಂದ ಸಹಸ್ರಲಿಂಗ, ಯಾಣ, ಬನವಾಸಿ, ಗೋಕರ್ಣಕ್ಕೆ ಬೆಳಗ್ಗೆ 6 ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಕುಮಟಾದಿಂದ ಗೋಕರ್ಣ ಮತ್ತು ಯಾಣಕ್ಕೆ ಮುಂಜಾನೆ 06.00 ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಅಂಕೋಲಾದಿಂದ ಗೋಕರ್ಣಕ್ಕೆ ಬೆಳಗ್ಗೆ 6 ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಭಟ್ಕಳದಿಂದ ಮತ್ತು ಹೊನ್ನಾವರದಿಂದ ಮುರ್ಡೇಶ್ವರಕ್ಕೆ ಬೆಳಗ್ಗೆ 6 ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಯಲ್ಲಾಪುರದಿಂದ ಇಡಗುಂದಿಗೆ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕರು ಸದರಿ ವಿಶೇಷ ಸಾರಿಗೆ ಕಾರ್ಯಾಚರಣೆಯ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಭಕ್ತಾಧಿಗಳು ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾಸಂಸ್ಥೆ ಉಕ ವಿಭಾಗ,ಶಿರಸಿ ಅವರ ಪ್ರಕಟಣೆ ತಿಳಿಸಿದೆ.