ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಶಿರಸಿ ತಾಲ್ಲೂಕಾ ಘಟಕದ ಆಶ್ರಯದಲ್ಲಿ ಕನ್ನಡ ಕಾರ್ತಿಕ 2023 ಅಂಗವಾಗಿ ನೆನಪಿನಂಗಳದಲ್ಲಿ ಬೀಚಿ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ನವೆಂಬರ್ 3, ಶುಕ್ರವಾರ ಸಂಜೆ 4 ಗಂಟೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಡೀನ್, ಸಾಹಿತಿ ಡಾ. ಜಿ.ಎ.ಹೆಗಡೆ ಸೋಂದಾ ಆಶಯ ನುಡಿ ಆಡಲಿದ್ದು, ಶಿರಸಿ ಕಸಾಪ ಕಾರ್ಯಕಾರಿಣಿ ಸದಸ್ಯ ಡಿ. ಬಂಗಾರಪ್ಪ ಉಪಸ್ಥಿತರಿರಲಿದ್ದಾರೆ. ಶಿರಸಿ ಕಸಾಪ ಅಧ್ಯಕ್ಷ ಹಿರಿಯ ಪತ್ರಕರ್ತ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದು, ಬೀಚಿ ಸಾಹಿತ್ಯದ ಅವಲೋಕನದಲ್ಲಿ ಹಿರಿಯ ಸಾಹಿತಿಗಳಾದ ಡಿ.ಎಸ್.ನಾಯ್ಕ, ಜಿ.ವಿ. ಕೊಪ್ಪಲತೋಟ, ಹನುಮಂತ ಮ. ಸಾಲಿ ಕೃತಿ ಅವಲೋಕನ ನಡೆಸಲಿದ್ದಾರೆ. ವಿ.ಪಿ.ಹೆಗಡೆ ವೈಶಾಲಿ, ಆರ್.ಡಿ.ಆಲ್ಮನೆ, ಡಿ.ಎಂ.ಭಟ್ ಕುಳವೆ, ಕೃಷ್ಣ ಪದಕಿ ಸಂವಾದದಲ್ಲಿ ಭಾಗವಹಿಸಲಿದ್ದಾರೆಂದು ಶಿರಸಿ ಕಸಾಪ ಗೌರವ ಕೋಶಾಧ್ಯಕ್ಷ ವಿ.ಆರ್. ಹೆಗಡೆ ಮತ್ತಿಘಟ್ಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.