Slide
Slide
Slide
previous arrow
next arrow

ನ.1ಕ್ಕೆ ಶ್ರೀಕ್ಷೇತ್ರ ಭುವನಗಿರಿಯಲ್ಲಿ ರಾಜ್ಯೋತ್ಸವ; ‘ಮಾತೃ ವಂದನಾ’ ಕಾರ್ಯಕ್ರಮ

300x250 AD

ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ನ.1ರಂದು ಬೆಳಿಗ್ಗೆ 10 ಗಂಟೆಯಿoದ ‘ಮಾತೃ ವಂದನಾ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಾರಂಭದಲ್ಲಿ ಶ್ರೀ ಭುವನೇಶ್ವರೀ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ ಮಧುಸೂಧನ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ದೇವರಾಜ ಹಿತ್ತಲಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗಣಪತಿ ಈರಾ ನಾಯ್ಕ, ಪ್ರೌಢಶಾಲಾ ವಿಶ್ರಾಂತ ಮುಖ್ಯಾಧ್ಯಾಪಕ, ಶಿಕ್ಷಣಾಭಿಮಾನಿ ಆರ್.ಎಸ್.ಹೆಗಡೆ ಶಿರಸಿ, ಬೇಡ್ಕಣಿ ಗ್ರಾ.ಪಂ.ಸದಸ್ಯ ಗೋವಿಂದ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಮಾತೃವಂದನಾ ಸಮಿತಿಯ ಗೌರವ ಸಲಹೆಗಾರ ಅನಂತ ಭಟ್ಟ ಮುತ್ತಿಗೆ ಗೌರವ ಉಪಸ್ಥಿತಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಭುವನೇಶ್ವರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ವಹಿಸಲಿದ್ದಾರೆ.

300x250 AD

ಈ ಸಂದರ್ಭದಲ್ಲಿ ವಿಶ್ರಾಂತ ಉಪನ್ಯಾಸಕ, ವಿದ್ವಾನ್ ಗಂಗಾಧರ ಭಟ್ಟ ಮಣ್ಣಿಕೊಪ್ಪ, ವಿಶ್ರಾಂತ ಯೋಧ-ಶಿಕ್ಷಕ ಗೋವಿಂದ ಹರಗಿ ಬೇಡ್ಕಣಿ, ಖ್ಯಾತ ಚಿತ್ರ ಕಲಾವಿದೆ ಡಾ.ಪದ್ಮಶ್ರೀ ಹೆಗಡೆ ಬಿದ್ರಕಾನ ಅವರುಗಳಿಗೆ ‘ಶ್ರೀ ಮಾತಾ ಅನುಗ್ರಹ’ ಗೌರವ ಸಂಮಾನ ಪ್ರಶಸ್ತಿ ಪ್ರದಾನ ನಡೆಯಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ಸ್ಪಂದನಾ ಚಂದ್ರಕಾoತ ಮಡಿವಾಳ, ತುಷಾರ ಘನಶ್ಯಾಮ ಪಟೇಲ, ದೀಪ್ತಿ ವಿನಾಯಕ ಶೇಟ್ ಹಾಗೂ ಚಿನ್ಮಯ ಕೆ.ಎಲ್. ಅವರುಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಶ್ರೀ ಭುವನೇಶ್ವರಿ ದೇವಾಲಯ ಆಡಳಿತ ಮಂಡಳಿ ಹಾಗೂ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಯಾವತ್ತೂ ಕನ್ನಡಾಭಿಮಾನಿಗಳು, ಕನ್ನಡಾಂಬೆಯ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀಕ್ಷೇತ್ರ ಭುವನಗಿರಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ, ಮಾತೃವಂದನಾ ಸಮಿತಿಯ ಕಾರ್ಯಾಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಪ್ರಕಟಣೆಯ ಮೂಲಕ ಕೋರಿದ್ದಾರೆ.

Share This
300x250 AD
300x250 AD
300x250 AD
Back to top