ಸಿದ್ದಾಪುರ: ಕ್ಷೇತ್ರದ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ರೀತೀಯ ತೊಂದರೆಯಾಗಲು ಬಿಡುವುದಿಲ್ಲ. ಜನಪ್ರತಿನಿಧಿಯಾದ ನಾನು ಯಾವತ್ತೂ ಜನರ ಜತೆ ಇರುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ವಾಜಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾನಳ್ಳಿ ಗ್ರಾಮಸ್ಥರಿಂದ ಏರ್ಪಡಿಸಲಾದ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಹಳೆಯ ಅತಿಕ್ರಮಣದಾರರಿಗೆ ಏನು ತೊಂದರೆಯಾಗದ0ತೆ ನೋಡಿಕೊಳ್ಳಲಾಗುವುದು. ಯಾರೂ ಕೂಡ ಹೊಸದಾಗಿ ಅತಿಕ್ರಮಣ ಮಾಡಬೇಡಿ ಎಂದ ಅವರು, ಗ್ರಾಮದ ಅಂಗನವಾಡಿಯ ಮೇಲ್ಚಾವಣಿ ದುರಸ್ಥಿಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು. ಕಾನಳ್ಳಿ ಹಾಗೂ ಸುತ್ತಮುತ್ತಲಿನ ಜನತೆ ನೀಡಿದ ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರಿಸುವ ಜತೆಗೆ ನಿಮ್ಮಗಳ ಜತೆ ಸದಾ ಇರುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ನಾಯ್ಕ ಮಾತನಾಡಿ, ಬಡವರ ಬಂಧು ಹಾಗೂ ಜನನಾಯಕ ಭೀಮಣ್ಣ ನಾಯ್ಕ ತಮ್ಮನ್ನು ಮತ ನೀಡಿ ಗೆಲ್ಲಿಸಿದ ಮತದಾರರಿಗಷ್ಟೇ ಅಲ್ಲದೇ ಕ್ಷೇತ್ರದ ಸಮಸ್ತ ಜನತೆಯ ಪ್ರತಿನಿಧಿಯಾಗಿದ್ದಾರೆ. ಎಲ್ಲರನ್ನು ಸಮಾನಾಗಿ ಕಾಣುವ ಜನಪ್ರತಿನಿಧಿ ಭೀಮಣ್ಣ ನಾಯ್ಕ ಆಗಿದ್ದಾರೆ. ಅವರ ಅವಧಿಯಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಲಿ ಎಂದ ಅವರು, ಸ್ತ್ರೀಯರು ಹಾಗೂ ಯುವಜನತೆಗೆ ಕೆಲಸ ಇಲ್ಲ. ಕೈಗಾರಿಕೆಗಳನ್ನು ಹುಟ್ಟು ಹಾಕಿ ಅವರಿಗೆ ಕೆಲಸ ಕೊಡಬೇಕು. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಕಾನಳ್ಳಿ ಗ್ರಾಮಸ್ಥರಿಂದ ಶಾಸಕ ಭೀಮಣ್ಣ ನಾಯ್ಕ ಹಾಗೂ ತಾಲೂಕಾ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ ಇವರನ್ನು ಸನ್ಮಾನಿಸಲಾಯಿತು. ವಾಜಗೋಡ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ ಮಡಿವಾಳ ಹಾಗೂ ಮಾಜಿ ಉಪಾಧ್ಯಕ್ಷ ಎಸ್.ಎಂ.ಭಟ್ ಮಾತನಾಡಿದರು. ಕಾನಳ್ಳಿ ಕೇಶವ ದೇವಸ್ಥಾನದ ಅಧ್ಯಕ್ಷ ಜಿ.ಟಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ವಾಜಗೋಡ ಗ್ರಾಪಂ ಅಧ್ಯಕ್ಷೆ ಸರಸ್ವತಿ ಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿ.ಡಿ.ನಾಯ್ಕ, ಇಟಗಿ ಸೊಸೈಟಿ ಉಪಾಧ್ಯಕ್ಷ ಎಂ.ಬಿ.ನಾಯ್ಕ, ಗ್ರಾಪಂ ಸದಸ್ಯರಾದ ಚಂದ್ರಕಲಾ ನಾಯ್ಕ, ಸುರೇಶ ನಾಯ್ಕ, ಶ್ರೀಪಾದ ಹೆಗಡೆ, ಯಶೋಧಾ ಹಸ್ಲರ್, ನಾಗರಾಜ ಗೌಡರ್, ಟಿಎಂಎಸ್ ನಿರ್ದೇಶಕ ಗಣಪತಿ ಹಸ್ಲರ್, ಸಂಪಖ0ಡ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಭಾಸ್ಕರ ನಾಯ್ಕ ಮುಂಡಿಗೆತಗ್ಗು, ಮಾಬ್ಲಾ ನಾಯ್ಕ ಸಂಪಖ0ಡ, ಬೂತ್ ಅಧ್ಯಕ್ಷ ಅಶೋಕ ನಾಯ್ಕ, ನಾಗೇಂದ್ರ ನಾಯ್ಕ ಕಾನಳ್ಳಿ, ಬಾಲಚಂದ್ರ ನಾಯ್ಕ ಕಾನಳ್ಳಿ, ಗಣಪತಿ ಆರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಅಣ್ಣಪ್ಪ ನಾಯ್ಕ ನಿರೂಪಿಸಿದರು. ಮೋಹನ ನಾಯ್ಕ ಸ್ವಾಗತಿಸಿದರು. ಕೆ.ಬಿ.ನಾಯ್ಕ ವಂದಿಸಿದರು. ಗಣಪತಿ ನಾಯ್ಕ ಸ್ಮರಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.