Slide
Slide
Slide
previous arrow
next arrow

ಅರಣ್ಯಾಧಿಕಾರಿಗಳ ದೌರ್ಜನ್ಯ: ಸಚಿವ ಪೂಜಾರಿ ಆಕ್ರೋಶ

300x250 AD

ಹೊನ್ನಾವರ: ತಾಲೂಕಿನ ಚಿಕ್ಕನಕೋಡ ಗ್ರಾಮದ ಹೊಸಗೋಡ ಸಮೀಪ ತಿಮ್ಮೆ ಗೌಡರ ಮನೆಯ ಜಿ.ಪಿ.ಎಸ್ ಆದ ಅತಿಕ್ರಮಣ ಪ್ರದೇಶದಲ್ಲಿ ಬೆಳೆಸಿದ ಅಡಿಕೆ, ಬಾಳೆಗಿಡಗಳು ಹಾಗೂ ನೀರಾವರಿಗೆ ಅಳವಡಿಸಿದ ಪೈಪ್‌ಲೈನ್ ಅರಣ್ಯಾಧಿಕಾರಿಗಳು ಧ್ವಂಸ ಮಾಡುವ ಮೂಲಕ ಹಾನಿ ಮಾಡಿರುವ ಪ್ರದೇಶಕ್ಕೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಭೇಟಿ ನೀಡಿದರು.

ಅತಿಕ್ರಮಣ ಜಿ.ಪಿ.ಎಸ್ ದಾಖಲೆ ಹಾಗೂ ದಂಡ ತುಂಬಿರುವ ರಶೀದಿ ಹಾನಿಗೊಳಿಸಿದ ಅಡಿಕೆ ಬಾಳೆ ಗಿಡಗಳನ್ನು ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 60 ಸಾವಿರದಷ್ಟು ಅತಿಕ್ರಮಣದಾರರಿದ್ದಾರೆ. ಪ್ರಕರಣವು ಕೋರ್ಟ್ನಲ್ಲಿ ಇರುವುದರಿಂದ ಯಾರಿಗೂ ಸಮಸ್ಯೆ ಆಗಬಾರದು. ಜಿಪಿಎಸ್ ಆದ ಒಂದೆ ಒಂದು ಮನೆ ಅಥವಾ ಅವರು ಬೆಳಿಸಿದ ಬೆಳೆಗೆ ಹಾನಿ ಮಾಬಾರದು. ಬಡವರಿಗೆ ತೊಂದರೆ ನೀಡಿದರೆ ಜಿಲ್ಲೆಯಲ್ಲಿ ಆ ಅಧಿಕಾರಿ ಕರ್ತವ್ಯದಲ್ಲಿ ಇರುದಿಲ್ಲ ಎನ್ನುವ ಎಚ್ಚರಿಕೆ ನೀಡಲಾಗಿತ್ತು. ದುರಾದೃಷ್ಟಕ್ಕೆ ಇವತ್ತು ಸರ್ಕಾರ ಬದಲಾದಾಗ ತಿಮ್ಮೇಗೌಡರ ಮನೆಯಲ್ಲಿರುವಂತಹ ಮೂರುವರೆ ಎಕರೆ ಜಾಗ ಅವರ ಅತಿಕ್ರಮಣ ಭೂಮಿಯನ್ನ ಸುಮಾರು ಮೂವತ್ತು ನಲವತ್ತು ವರ್ಷಗಳ ಅನುಭೋಗ ಮಾಡಿಕೊಂಡ ಭೂಮಿಯನ್ನು ಸುಬ್ರಹ್ಮಣ್ಯ ಎನ್ನುವ ಅರಣ್ಯ ಅಧಿಕಾರಿ ಬಂದು ಅವರ ಎಷ್ಟೋ ವರ್ಷಗಳಿಂದ ಇರುವಂತ ಬಾಳೆ, ಅಡಿಕೆ, ತೆಂಗು ಅದನ್ನೆಲ್ಲವನ್ನ ತೆಗೆದು ಅನ್ಯಾಯ ಮಾಡಿದ್ದಾರೆ. ಈ ಬಡ ಕುಟುಂಬ ಬೀದಿಗೆ ಬೀಳುವಂತದ್ದು ಖಂಡನೀಯ. ಸುಪ್ರೀಂಕೋರ್ಟ್ ಕಾಯ್ದೆ ಕಾನೂನು ತಿದ್ದುಪಡಿ ಆಗುವವರೆಗೆ ಅವರ ಬದುಕನ್ನು ಮುಟ್ಟಬಾರದು ಎಂದರು.

ಕಾ0ಗ್ರೇಸ್ ಸರ್ಕಾರ ಏನು ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಭಾಗದ ಶಾಸಕರು ತಕ್ಷಣ ಈ ಪ್ರದೇಶಕ್ಕೆ ಬರಬೇಕಿತ್ತು. ನಿಮ್ಮ ಅಧಿಕಾರಿಗಳನ್ನು ಕರೆದು ಯಾರು ಸುಬ್ರಮಣ್ಯ ಎನ್ನುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಲ್ಲಿಯ ಡಿಎಫ್ ಒ ಸಹಿತ ಯಾವುದೇ ಅಧಿಕಾರಿಗಳು ಬಡವರ ತುಂಡು ಭೂಮಿಯನ್ನು ಮುಟ್ಟಿದರೆ, ಅತಿಕ್ರಮಣ ಮಾಡಿದ್ದಾರೆ ಅಂತ ಯಾವುದೇ ಅಡಿಕೆ ಗಿಡವನ್ನು ತೆಂಗಿನ ಗಿಡವನ್ನು ಬಾಳೆ ಗಿಡವನ್ನು ಕಡಿದರೆ ಭಾರತೀಯ ಜನತಾ ಪಕ್ಷದ ನಾವೆಲ್ಲ ಹಾಲಿ,ಮಾಜಿ ಶಾಸಕರು ಇದ್ದೇವೆ. ಯಾವ ಕಾರಣಕ್ಕೂ ಸಹಿಸೋದಿಲ್ಲ, ಜಿಪಿಎಸ್ ಆಗಿರುವಂತಹ ಅತಿಕ್ರಮಣದಾರರಿಗೆ ತೊಂದರೆ ಕೊಟ್ಟರೆ ಭಾರತೀಯ ಜನತಾ ಪಕ್ಷದ ನಮ್ಮೆಲ್ಲ ಶಾಸಕರು ಮಾಜಿ ಶಾಸಕರು ಒಟ್ಟಾಗಿ ಉತ್ತರ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿ ಅವರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಆ ಕಾರಣಕ್ಕೆ ಯಾವುದೇ ವಿವಾದಗಳಿಲ್ಲ ಯಾವುದೇ ಗೊಂದಲ ಮಾಡಬಾರದು. ಅರವತ್ತು ಸಾವಿರಕ್ಕೂ ಮಿಕ್ಕಿರುವಂತಹ ಅರಣ್ಯವಾಸಿ ಕುಟುಂಬಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಅತ್ಯಂತ ಜಾಗೃತಿ ಸರ್ಕಾರಕ್ಕೆ ಇದೆ ಎಂದರು.

ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅತಿಕ್ರಮಣದಾರರಿಗೆ ಯಾವ ರೀತಿ ಸಮಸ್ಯೆ ಆಗುತ್ತಿದೆ ಎನ್ನುದಕ್ಕೆ ನಮ್ಮ ಕ್ಷೇತ್ರವೇ ಸಾಕ್ಷಿಯಾಗಿದೆ. ಸೌಜನ್ಯಕ್ಕಾದರೂ ಇಲ್ಲಿಯ ಜನ ಪ್ರತಿನಿಧಿಗಳು ಮತ್ತು ಸಚಿವರು ಬಂದು ಭೇಟಿ ಕೊಡಬಹುದಿತ್ತು. ಆದರೆ ಇಲ್ಲಿ ಭೇಟಿ ಕೊಡುವಂತ ಕೆಲಸ ಮಾಡಿಲ್ಲ. ಕಷ್ಟ ಸುಖಗಳನ್ನ ವಿಚಾರಿಸಬೇಕಿತ್ತು, ಅದು ಕೂಡ ಆಗಿಲ್ಲ. ಮುಂದೆ ಬರುವಂತ ದಿವಸದಲ್ಲಿ ಈ ಅತಿಕ್ರಮಣದಾರರಿಗೆ ಏನಾದರೂ ತೊಂದರೆ ಕೊಡುವಂತ ಕೆಲಸ ಮಾಡಿದರೆ ಭಾರತೀಯ ಜನತಾ ಪಾರ್ಟಿ ಡಿಸಿ ಆಫೀಸ್‌ಗೆ ಮುತ್ತಿಗೆ ಹಾಕುವಂತ ಕೆಲಸ ಮಾಡಲಿದೆ. ಅರಣ್ಯ ಇಲಾಖೆ ಹೊಸ ಅತಿಕ್ರಮಣ ಮಾಡುವವರ ತೆರವು ಗೊಳಿಸುವಂತ ಕೆಲಸ ಮಾಡಲಿ ನಾನು ಅದಕ್ಕೆ ನಿಮಗೆ ಯಾವುದೇ ಹಸ್ತಕ್ಷೇಪ ಮಾಡುದಿಲ್ಲ. ನಿಮ್ಮ ಕಾನೂನು ಏನಿದೆ ಅದನ್ನು ಮಾಡಿಕೊಳ್ಳಿ. ಅರವತ್ತು ವರ್ಷ ನಲವತ್ತು ವರ್ಷ ಜಿಪಿಎಸ್ ಆದ ಜಾಗವನ್ನು ಅರಣ್ಯ ಇಲಾಖೆ ತೆರವು ಮಾಡಲಿದೆ ಎಂದರೆ ಈ ಸರ್ಕಾರಕ್ಕೆ ನಾನು ಛೀಮಾರಿ ಹಾಕುವಂತ ಕೆಲಸ ಮಾಡ್ತೇನೆ. ಬಡವರ ಪರವಾಗಿ ಇರುವಂತಹ ಸರ್ಕಾರ ಅಲ್ಲ ಇದು. ಕೇವಲ ರಾಜಕಾರಣಕ್ಕೋಸ್ಕರ ಜೀವನವನ್ನು ಮಾಡುವಂತಹ ಸರ್ಕಾರ. ಸಚಿವರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಈ ಜಾಗಕ್ಕೆ ಭೇಟಿ ಕೊಟ್ಟು ಇಲ್ಲಿಯ ಸಮಸ್ಯೆಗಳನ್ನ ಆಲಿಸಿ ಇವರಿಗೆ ನ್ಯಾಯ ಕೊಡುವಂತ ಕೆಲಸ ನೀವು ಮಾಡದಿದ್ದರೆ ಖಂಡಿತ ಮುಂದಿನ ದಿವಸದಲ್ಲಿ ತಕ್ಕ ಪಾಠ ಕಲಿಸುವಂತ ಕೆಲಸ ಆಗುತ್ತದೆ ಎಂದರು.

300x250 AD

ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಹಕ್ಕು ಪತ್ರ ಕೊಡಲಿಕ್ಕೆ ಆಗಲಿಲ್ಲ ಎಂದು ಸಚಿವ ಮಂಕಾಳ ವೈದ್ಯರು ಆರೋಪ ಮಾಡುತ್ತಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ನಮ್ಮ ಅವಧಿಯಲ್ಲಿ 248 ಮನೆಗಳಿಗೆ ಹಕ್ಕು ಪತ್ರ ಕೊಡುವಂತಹ ಕೆಲಸ ಮಾಡಿದ್ದೇವೆ. ಇವತ್ತು ಹೊಸ ನಿಯಮ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿಲ್ಲ. ಆದರೆ ಎಲ್ಲೂ ಅತಿಕ್ರಮಣದಾರರಿಗೆ ತೊಂದರೆ ಕೊಡುವಂತ ಕೆಲಸ ಒಂದೇ ಒಂದು ಪ್ರಕರಣ ನಡೆದಿಲ್ಲ. ಇವತ್ತು ಮಂಕಾಳ ವೈದ್ಯರು ಸಚಿವರಾಗಿ, ಶಾಸಕರಾಗಿ ಕೇವಲ ಮೂರೂ ತಿಂಗಳಲ್ಲಿ ಇವತ್ತು ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸುವಂತ ಕೆಲಸ ಆರಂಭವಾಗಿದೆ ಇವತ್ತು ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಮಾಡಲಿಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ದೌರ್ಜನ್ಯಕ್ಕೊಳಗಾದ ತಿಮ್ಮೇ ಗೌಡ ಮಾತನಾಡಿ, ನಮ್ಮದು ಹೊಸ ಅತಿಕ್ರಮಣವಲ್ಲ. ನಾವು ನಲವತ್ತು ವರ್ಷಗಳಿಂದ ಇಲ್ಲಿಯೇ ವಾಸವಾಗಿರುವುದು. ಏಕಾಏಕಿ ಅರಣ್ಯ ಅಧಿಕಾರಿಗಳು ಆಗಮಿಸಿ ತೋಟಕ್ಕೆ ಹಾನಿ ಮಾಡಿದ್ದಾರೆ. ಇದಲ್ಲದೆ ನಾನು ಮನೆಯಲ್ಲಿಲ್ಲದ ಸಮಯದಲ್ಲಿ ಮನೆಗೆ ಬಂದು ಕುಟುಂಬಸ್ಥರಿಗೆ ನಿಮಗೆ ಮುಂದೈತೆ ಮಾರಿಹಬ್ಬ ಎಂದು ಅರಣ್ಯ ಅಧಿಕಾರಿಗಳು ಬೆದರಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ತಾಲೂಕಾಧ್ಯಕ್ಷ ರಾಜೇಶ್ ಭಂಡಾರಿ, ಮಂಜುನಾಥ ನಾಯ್ಕ ಗೇರುಸೊಪ್ಪ, ಪ್ರಮೋದ್ ನಾಯ್ಕ, ಎಂ.ಎಸ್.ಹೆಗಡೆ, ಹರಿಶ್ಚಂದ್ರ ನಾಯ್ಕ, ಬಾಲಕೃಷ್ಣ ಗೌಡ, ಮೋಹನ್ ನಾಯ್ಕ, ಹೊನ್ನಾವರ ಪಟ್ಟಣ ಪಂಚಾಯತ,ಚಿಕ್ಕನಕೊಡ್ ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Share This
300x250 AD
300x250 AD
300x250 AD
Back to top