Slide
Slide
Slide
previous arrow
next arrow

ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಕೆ

300x250 AD

ಭಟ್ಕಳ: ಕಾರ್ಮಿಕರ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿ ಸೆಂಟ್ರಿಂಗ್ ಕಾರ್ಮಿಕರ ಸಂಘ, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ ಹಾಗೂ ಪೇಂಟಿಂಗ್ ಕಾರ್ಮಿಕರ ಸಂಘಗಳು ಜಂಟಿಯಾಗಿ ಸಚಿವ ಮಂಕಾಳ್ ಎಸ್.ವೈದ್ಯರವರಿಗೆ ಸಚಿವರ ಕಛೇರಿಯಲ್ಲಿ ಮನವಿ ಪತ್ರ ಸಲ್ಲಿಸಿತು.

ತಾಲೂಕಿನ ಕಾರ್ಮಿಕ ನಿರೀಕ್ಷಕರ ವೃತ್ತದಲ್ಲಿ ನಕಲಿ ಕಾರ್ಮಿಕರ ಕಾರ್ಡ್ ಹೊಂದಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿಬಾರಿ ಸರಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಬರುವ ಸೌಲಭ್ಯಗಳಾದ ಕಾರ್ಮಿಕರ ಟೂಲ್ ಕಿಟ್, ಶಾಲಾ ಮಕ್ಕಳ ಕಿಟ್, ಮೆಡಿಕಲ್ ಕಿಟ್, ಕಾರ್ಮಿಕರ ಮಕ್ಕಳಿಗೆ ಸಿಗುವ ಲ್ಯಾಪ್ ಟಾಪ್ ಮತ್ತು ಟ್ಯಾಬ್ ಮುಂತಾದವು ಯಾವುದೂ ಕೂಡ ನಿಜವಾದ ಬಡಕಾರ್ಮಿಕರಿಗೆ ದೊರಕುತ್ತಿಲ್ಲ. ಬಡ ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆಯಲು ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿ ಹಾಗೂ ನಮ್ಮ ಸಂಘದ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಕೂಡ ಈ ಸೌಲಭ್ಯಗಳು ನಕಲಿ ಕಾರ್ಮಿಕ ಕಾರ್ಡ್ ಹೊಂದಿದವರು, ಮಧ್ಯವರ್ತಿಗಳು ಹಾಗೂ ಅವರ ಅವಲಂಬಿತರ ಕೈ ಸೇರುತ್ತದೆಯೇ ಹೊರತು ನಿಜವಾದ ಕಾರ್ಮಿಕರಿಗೆ ಸಿಗದೇ ಬಹಳಷ್ಟು ಅನ್ಯಾಯವಾಗುತ್ತಿದೆ ಎಂದು ದೂರಿದರು.

ಇದಕ್ಕೆಲ್ಲಾ ಮೂಲ ಕಾರಣ ತಾಲೂಕಿನಲ್ಲಿ ಕಾಯಂ ಕಾರ್ಮಿಕ ನಿರೀಕ್ಷಕರು ಇಲ್ಲದೇ ಇರುವುದಾಗಿದೆ. ಈಗ ಇರುವ ಕಾರ್ಮಿಕ ನಿರೀಕ್ಷಕರು ಮೂರು ತಾಲೂಕನ್ನು ನೋಡಿಕೊಳ್ಳುತ್ತಿರುವುದರಿಂದ ಇಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದು ಅವರಿಗೂ ಕೂಡ ಕಷ್ಟವಾಗಿದೆ. ಹಾಗಾಗಿ ಕಾಯಂ ಆಗಿ ತಾಲೂಕಿನಲ್ಲಿಯೇ ಕಾರ್ಯನಿರ್ವಹಿಸುವಂತೆ ಒಬ್ಬ ಕಾರ್ಮಿಕ ನಿರೀಕ್ಷಕರ ಅವಶ್ಯಕತೆ ಇದೆ ಎಂದು ಗಮನ ಸೆಳೆದರು. ಹಲವು ಬಾರಿ ಕಾರ್ಮಿಕರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಕೂಡ ಯಾವುದೇ ಕ್ರಮವಾಗಿಲ್ಲ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕಾರ್ಮಿಕ ಸಂಘಟನೆಗಳು ಸೇರಿ ಹೋರಾಟ ಮಾಡಲೂ ಕೂಡ ನಿರ್ಧರಿಸಿರುತ್ತೇವೆ ಎಂದು ತಿಳಿಸಿದರು.

300x250 AD

ಮನವಿ ಸ್ವೀಕರಿಸಿದ ಸಚಿವ ವೈದ್ಯ, ಇನ್ನು ಹದಿನೈದು ದಿನದೊಳಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಭಟ್ಕಳಕ್ಕೆ ಕರೆಯಿಸಿ ತಮ್ಮೆದುರೇ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಸುಬ್ರಾಯ ನಾಯ್ಕ, ಶಿವರಾಮ ಹೊನ್ನೆಗದ್ದೆ, ರಾಮ ಹೆಬಳೆ, ಬಾಬು ನಾಯ್ಕ, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಮಾದೇವ ಗೊಂಡ, ಮಾರುತಿ ನಾಯ್ಕ, ರಮೇಶ ಗಾಂಧಿನಗರ, ಕೃಷ್ಣ ನಾಯ್ಕ, ಮೋಹನ ನಾಯ್ಕ, ಪೇಂಟಿಂಗ್ ಸಂಘದ ಕಾರ್ಯದರ್ಶಿ ಮಂಜುನಾಥ ಗೊಂಡ ಹಾಗೂ ಮೂರು ಸಂಘದ ಇನ್ನಿತರ ಸದಸ್ಯರುಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top