Slide
Slide
Slide
previous arrow
next arrow

ಸದೃಢ ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರ ಮಹತ್ವದ್ದು: ಯು.ಎಸ್. ಪಾಟೀಲ್

300x250 AD

ದಾಂಡೇಲಿ: ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕ- ಶಿಕ್ಷಕಿಯರ ಪಾತ್ರ ಮಹತ್ವಪೂರ್ಣವಾಗಿದೆ. ಶಿಕ್ಷಕ, ಶಿಕ್ಷಕಿಯಾಗಿ ಸೇವೆ ಮಾಡುವುದೇ ಪರಮ ಪುಣ್ಯದ ಸೇವೆ. ಈ ಸೇವೆಯಲ್ಲಿ ಆತ್ಮತೃಪ್ತಿಯಿದೆ. ಉತ್ತಮ ಶಿಕ್ಷಕ, ಶಿಕ್ಷಕಿಯರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳನ್ನು ತಿದ್ದಿ- ತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸುವಲ್ಲಿ ಶಿಕ್ಷಕ- ಶಿಕ್ಷಕಿಯರ ಕೊಡುಗೆ ಅಪಾರವಾಗಿದೆ ಎಂದು ನಗರದ ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್.ಪಾಟೀಲ್ ಹೇಳಿದರು.

ಅವರು ಕರ್ನಾಟಕ ಸಂಘದ ಸಭಾಭವನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿಯವರ ನಿವೃತ್ತಿಯಾಗುವ ಸಂದರ್ಭದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕನ್ಯಾವಿದ್ಯಾಲಯದ ಶಿಕ್ಷಕಿ ಸರೋಜಿನಿ ರಾಯ್ಕರ್ ಮಾತನಾಡಿ, ಸರಸ್ವತಿ ಲಕ್ಕಲಕಟ್ಟಿಯವರ ಶೈಕ್ಷಣಿಕ ಸೇವೆ ಮತ್ತು ಕಾಳಜಿ ಸದಾ ಅನುಕರಣೀಯ ಮತ್ತು ಅಭಿನಂದನೀಯ. ಸುಧೀರ್ಘ ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತಾವು ಶ್ರದ್ಧೆಯಿಂದ ತೊಡಗಿಸಿಕೊಂಡ ಹೆಗ್ಗಳಿಕೆ ಸರಸ್ವತಿ ಲಕ್ಕಲಕಟ್ಟಿಯವರಿಗೆ ಸಲ್ಲಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಅವರು ಸರಸ್ವತಿ ಲಕ್ಕಲಕಟ್ಟಯವರು ಮಕ್ಕಳೀಗೆ ಗುರುಮಾತೆಯಾಗದೇ ಮಾತೃಹೃದಯದ ವಾತ್ಸಲ್ಯಮಯಿಯಾಗಿದ್ದಾರು. ಅವರ ಸೇವೆ ಸದಾ ಸ್ಮರಣೀಯ ಎಂದು ಅವರ ನಿವೃತ್ತ ಜೀವನವು ಸುಖಕರವಾಗಿರಲೆಂದು ಶುಭವನ್ನು ಹಾರೈಸಿದರು.

300x250 AD

ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಆಶಾ ದೇಶಭಂಡಾರಿ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅನೀಲ್ ನಾಯ್ಕರ್, ಸರಸ್ವತಿ ಲಕ್ಕಲಕಟ್ಟಿಯವರ ಪತಿ ಭೀಮಪ್ಪ ರಾಥೋಡ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ ನಾಯಕ ಹಾಗೂ ಸುರೇಖಾ ಲಕ್ಕಲಕಟ್ಟಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top