Slide
Slide
Slide
previous arrow
next arrow

ಎಲ್ಲರೂ ಪ್ರೀತಿಸಿ, ಅನುಸರಿಸುವ ಮಹಾಕಾವ್ಯ ವಾಲ್ಮೀಕಿ ರಾಮಾಯಣ: ನಾಗರಾಜ ಅಪಗಾಲ್

300x250 AD

ಹೊನ್ನಾವರ: ಯಾವುದೇ ಜಾತಿ ವ್ಯವಸ್ಥೆಗೆ ಒಳಗಾಗದೇ, ಎಲ್ಲಾ ಸಮಾಜದವರು ಪ್ರೀತಿಸಿ, ಅನುಸರಿಸುವ ಮಹಾಕಾವ್ಯ ವಾಲ್ಮೀಕಿ ರಾಮಾಯಣವಾಗಿದೆ ಎಂದು ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ್ ಅಭಿಪ್ರಾಯಪಟ್ಟರು.

ಪ.ಪಂ.ಸಭಾಭವನದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ವಾಲ್ಮೀಕಿ ರಾಮಾಯಾಣ ರಚಿಸಿರುವುದರಿಂದ ಇದನ್ನು ಪ್ರತಿಯೊರ್ವರು ಓದಿ ಅರ್ಥೈಸಿಕೊಳ್ಳಬಹುದಾಗಿದೆ. ರಾಮಾಯಣದ ಆದರ್ಶ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಯು ಸಾರ್ಥಕವಾಗಲಿದೆ ಎಂದರು.

300x250 AD

ಶೈಕ್ಷಣಿಕವಾಗಿ ಸಾಧನೆ ಮಾಡಿದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಂತರಜಾತಿ ವಿವಾಹವಾದವರಿಗೆ ಸರ್ಕಾರದಿಂದ ಮಂಜೂರದ ಪೊತ್ಸಾಹಧನದ ಮಂಜೂರಾತಿ ಪತ್ರ ವಿತರಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ತಹಶಿಲ್ದಾರ ರವಿರಾಜ್ ದಿಕ್ಷೀತ್ ಮಾತನಾಡಿದರು. ಪ.ಪಂ. ಸದಸ್ಯರಾದ ಭಾಗ್ಯ ಮೇಸ್ತ, ನಿಶಾ ಶೇಟ್, ಸದಸ್ಯೆ ಮೇಧಾ ನಾಯ್ಕ, ಬಿಇಓ ಜಿ.ಎಸ್.ನಾಯ್ಕ, ತಾಲೂಕ ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ ವಿವಿಧ ಇಲಾಖೆಯ ಅಧಿಕಾರಿಗಳು ಜೈ ಭೀಮ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಸಮಾಜಕಲ್ಯಾಣ ಇಲಾಖೆ ಸುಮಂಗಲಾ ಭಟ್ ಸ್ವಾಗತಿಸಿ, ರಾಜೇಂದ್ರ ವಂದಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top