Slide
Slide
Slide
previous arrow
next arrow

ವಾಲ್ಮೀಕಿ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ: ಶಿವರಾಮ ಹೆಬ್ಬಾರ್

300x250 AD

ಯಲ್ಲಾಪುರ: ಮಹರ್ಷಿ ವಾಲ್ಮೀಕಿ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ದೇಶಕ್ಕೆ ಹೊಸ ಮನ್ವಂತರವನ್ನು ಕೊಟ್ಟ ಮಹಾನ್ ವ್ಯಕ್ತಿ, ಮನುಷ್ಯ ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟ ವ್ಯಕ್ತಿ, ವಾಲ್ಮೀಕಿ, ಬಸವಣ್ಣ, ಅಂಬೇಡ್ಕರಂತಹ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ, ಜಾತಿಯನ್ನು ಮೀರಿದ ವ್ಯಕ್ತಿಯಾಗಿದ್ದಾರೆ. ಜಾತಿಗಳಿಗೆ ಶಕ್ತಿಯಾಗಿದ್ದಾರೆ ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ತಾಲೂಕಾ ಪಂಚಾಯತ ಆವಾರದ ಗಾಂಧೀ ಕುಟೀರದಲ್ಲಿ ತಾಲೂಕ ಅಡಳಿತ, ತಾಲೂಕ ಪಂಚಾಯತ, ಪಟ್ಟಣ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿರವರ ಜಯಂತಿ ಕಾರ್ಯಕ್ರಮ ಅಂಗವಾಗಿ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಗಾಂಧಿಕುಟೀರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಾಧಕರು ನಾಡಿನ ಭಾಷೆ, ಸಂಸ್ಕೃತಿಗೆ ನೀಡಿರುವ ಕೊಡುಗೆಯನ್ನು ಸ್ಮರಣೆ ಮಾಡುವ ಕಾರ್ಯಕ್ರಮಗಳು, ನಮ್ಮ ಜೀವನದ ತಪ್ಪುಗಳು ನಮಗೆ ಭಯ ಹುಟ್ಟಿಸುವ ಹಾಗಿರಬೇಕು, ಭಗವಂತನ ನಾಮಸ್ಮರಣೆ ಹಾಗೂ ಪ್ರೀತಿ ಬೆಳೆಸಿಕೊಳ್ಳುವುದು, ಸಮಾಜಕ್ಕೆ ನಾವು ಹೇಗೆ ಉಪಕಾರಿಯಾಗಬೇಕು ಅನ್ನುವ ಸಂಘ ನೀತಿ, ರಾಮಾಯಣದಲ್ಲಿ ಸಿಗುವ ಸಂದೇಶ ನಮ್ಮ ಜೀವನಕ್ಕೆ ಬೇಕಾಗಿರುವಂತಹದಾಗಿದೆ. ವಾಲ್ಮೀಕಿ ಆದಿವಾಸಿಯ ರೂಪದರ್ಶಿಯಾಗಿದ್ದಾರೆ. ವಾಲ್ಮೀಕಿ ಆದರ್ಶಗಳು ನಾವು ಪಾಲಿಸಬೇಕು, ಜೊತೆಗೆ ಬುಡಕಟ್ಟು ಸಮುದಾಯದವರು ತಮ್ಮ ಆಚಾರ ವಿಚಾರಗಳನ್ನು ಮರೆಯಬಾರದು. ವಾಲ್ಮೀಕಿಯಿಂದ ಪ್ರೇರಣೆ ಪಡೆದು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

300x250 AD

ವೈಟಿಎಸ್‌ಎಸ್ ಶಿಕ್ಷಕ ವಿನೋದ ಭಟ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ಎಂ.ಗುರುರಾಜ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನೀಲ್ ಗಾವಡೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸದಾಶಿವ ಮಾಂಗ್, ಲೋಕೋಪಯೋಗಿ ಇಲಾಖೆ ಎಇಇ ವಿ ಎಂ ಭಟ್ಟ, ವಾಲ್ಮೀಕಿ ಸಮಾಜದ ಮುಖಂಡರಾದ ಭಿಮಸಿ ವಾಲ್ಮೀಕಿ, ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಎಎಸ್‌ಐ ಶ್ಯಾಮ ಪಾವಸ್ಕರ್ ವೇದಿಕೆಯಲ್ಲಿ ಇದ್ದರು.    ಶಿಕ್ಷಕಿ ಮೌಲ್ಯಾ ನಾಯಕ ಸ್ವಾಗತಿಸಿ, ವಂದಿಸಿದರು, ಶಿಕ್ಷಕ ನೆಲ್ಸನ್ ಗೊನ್ಸಾಲ್ವಿಸ್ ನಿರೂಪಿಸಿದರು. ಕಾರ್ಯಕ್ರಮಕ್ಕೂ ಪೂರ್ವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು

Share This
300x250 AD
300x250 AD
300x250 AD
Back to top