ಕಾರವಾರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಶಾಲೆಯ ಆವರಣವನ್ನು ತಳಿರು- ತೋರಣಗಳಿಂದ ಸಿಂಗರಿಸಿದ್ದರು. ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಹರ್ಷಿ ವಾಲ್ಮೀಕಿಯವರ ಸಾಧನೆಗಳನ್ನು ಮಕ್ಕಳಿಗೆ ಮುಖ್ಯಾಧ್ಯಾಪಕ ಅಖ್ತರ ಜೆ.ಸೈಯದ್, ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ ವಿವರಿಸಿದರು.
ಮಹರ್ಷಿ ವಾಲ್ಮೀಕಿಯವರು ಬಾಲ್ಯದ ಜೀವನ ಹಾಗೂ ಮುಂದೆ ಮಹರ್ಷಿ ಆದ ವಿವರವನ್ನು ತಿಳಿಸುತ್ತ ಮುಖ್ಯಾಧ್ಯಾಪಕ ಅಖ್ತರ್ ಸೈಯದ್ ಅವರು ರಾಮಾಯಣವನ್ನು ಅತ್ಯಂತ ಸ್ಪಟವಾಗಿ ಮನಮುಟ್ಟುವಂತೆ ಬರೆದುದು ವಾಲ್ಮೀಕಿಯವರ ಒಂದು ಸಾಧನೆ. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಹರ್ಷಿ ವಾಲ್ಮೀಖಿಯವರ ಜೀವನ ಚರಿತ್ರೆ ತಿಳಿದುಕೊಂಡರು. ಶಾಲೆಯ ಅಡುಗೆ ಸಿಬ್ಬಂದಿಗಳು ಹಾಜರಿದ್ದರು. ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಕ್ಕಳಿಗೆ ಹಣ್ಣಿನ ರಸ ಮತ್ತು ಹಣ್ಣಿನ ಪಾಯಸ ವಿತರಿಸಲಾಯಿತು.