ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಪ್ರತಿ ತಿಂಗಳ ಪ್ರಥಮ ಸೋಮವಾರದಂದು ಸಂಘಟಿಸಿಕೊಂಡು ಬರುತ್ತಿರುವ ಗುರು ಅರ್ಪಣೆ- ಕಲಾ ಅನುಬಂಧ ಸಂಗೀತ ಕಾರ್ಯಕ್ರಮವು ನ.06ರಂದು ಸಂಜೆ 5.30 ರಿಂದ ನಡೆಯಲಿದೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಯೋಗಮಂದಿರ ಮಾತೃ ಮಂಡಳಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು ನಂತರದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ವಿ.ವಸುಧಾ ಶರ್ಮ ಸಾಗರ ಹಾಗು ಗಾಯಕಿ ಶ್ರೀರಂಜನಿ ಎಚ್.ಸಿ ಇವರ ಗಾಯನ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ವಿನಾಯಕ ಸಾಗರ ಹಾಗು ಕಿರಣ್ ಕಾನಗೋಡು, ಹಾರ್ಮೋನಿಯಂನಲ್ಲಿ ವಿ. ಪ್ರಕಾಶ್ ಹೆಗಡೆ ಯಡಳ್ಳಿ, ಮೃದಂಗ ವಾದನದಲ್ಲಿ ನರಸಿಂಹ ಮೂರ್ತಿ ಸಾಗರ ಸಹಕರಿಸಲಿದ್ದಾರೆ.
ಸ್ವರ್ಣವಲ್ಲಿ ಶ್ರೀಗಳ ಪೀಠಾರೋಹಣದ 33ನೇ ವರ್ಷದ ಅಂಗವಾಗಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಆಯೋಜಿಸಿಕೊಂಡಿರುವ ಬರುತ್ತಿರುವ ವಿಶೇಷ ಸಂಗೀತ ಕಾರ್ಯಕ್ರಮವನ್ನು ಉ.ಕ. ಜಿಲ್ಲಾ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲೋಕೇಶ್ ಹೆಗಡೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಿರಸಿ ಪ್ರದೀಪ್ ಜ್ಯೂವೆಲರ್ಸ್ ನ ಪ್ರದೀಪ್ ಯಲ್ಲನಕರ, ನಿವೃತ್ತ ಇಂಜಿನಿಯರ್ ಎಂ.ಎನ್.ಹೆಗಡೆ ಮಾಳೇನಳ್ಳಿ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಸಂಗೀತಾಭಿಮಾನಿ ಆರ್.ಎನ್. ಭಟ್ ಸುಗಾವಿ ವಹಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಖ್ಯಾತ ತಬಲಾ ವಾದಕ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ಮತ್ತು ವಿ. ವಸುಧಾ ಶರ್ಮ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.