ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಪೋಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ.
ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎಂಬುವವರು ನೀಡಿದ ದೂರಿನಲ್ಲಿ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಜಗಜ್ಯೋತಿ ವೀರಶೈವ ಸಮಿತಿಯಿಂದ 15 ಸಾವಿರ ರೂ. ಬೇಡಿಕೆಯಿಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ದೂರಿನನ್ವಯ ಬಸವರಾಜ ನಂದಿಕೇಶ್ವರಮಠ ಇವರ ಬಳಿ 3000 ರೂ. ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ.ಕುಮಾರ್ ಚಂದ್, ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.