Slide
Slide
Slide
previous arrow
next arrow

ನ.5ಕ್ಕೆ ಅಂಕೋಲಾದಲ್ಲಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ

300x250 AD

ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಕಾರವಾರ ಹಾಗೂ ಅಂಕೋಲಾ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಎಕ್ಟಿವಿಟಿಸ್ ಎಸೋಶಿಯೇಶನ್ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2023 ಹಾಗೂ ಅಂತರ ಜಿಲ್ಲ್ಲಾ ಕಿರಿಯರ ಕ್ರೀಡಾಕೂಟ 2023 ಇದರ ಆಯ್ಕೆ ಪ್ರಕ್ರಿಯೆಯನ್ನು ಅಂಕೋಲಾ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನವೆಂಬರ್ 5ರಂದು ನಡೆಸಲಾಗುವುದು.

ಈ ಕ್ರೀಡಾಕೂಟದಲ್ಲಿ 14, 16, 18 ಮತ್ತು 20 ವಯೋಮಿತಿಯ ಬಾಲಕ-ಬಾಲಕಿಯರು ಭಾಗವಹಿಸಲು ಅವಕಾಶವಿದೆ. ಭಾಗವಹಿಸಲಿಚ್ಛಿಸುವವರು AFI-UID Registration ಅನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು. ಭಾಗವಹಿಸಲಿರುವ ಕ್ರೀಡಾಪಟುಗಳು ಜನ್ಮ ದಾಖಲೆ, ಆಧಾರ ಕಾರ್ಡ್ ಮೂಲ ಪ್ರತಿಯೊಂದಿಗೆ ನವೆಂಬರ್ 5ರ ಬೆಳಿಗ್ಗೆ 9 ಗಂಟೆಗೆ ಹಾಜರಿದ್ದು, ರೂ. 100 ನೋಂದಣಿ ಶುಲ್ಕವನ್ನು ಪಾವತಿಸಲು ಕೋರಲಾಗಿದೆ. ವಿಜೇತ ಕ್ರೀಡಾಪಟುಗಳಿಗೆ ಪದಕಗಳನ್ನು ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸದಾನಂದ ಎಂ. ನಾಯ್ಕ (+919448014307), ಕೆ.ಆರ್. ನಾಯಕ ಬೇಲೇಕೇರಿ (+919845846351), ಪ್ರಕಾಶ ರೇವಣಕರ (+919880748821), ನಮಿತಾ ಸಾರಂಗ (+918880881856) ಇವರನ್ನು ಸಂಪರ್ಕಿಸುವ0ತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top