ನುಡಿಜೇನು ವರದಿ
ಅಂಕೋಲಾ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಜನ್ಮ ದಿನಾಚರಣೆಯನ್ನು ಬಂಗಾರಪ್ಪ ಅಬಿಮಾನಿಗಳ ಬಳಗದ ವತಿಯಿಂದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.
ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಅನೇಕ ಜನಪರ ಯೋಜನೆಗಳನ್ನು ರಾಜ್ಯಕ್ಕೆ ತಂದ ಶ್ರೇಷ್ಠ ಮುತ್ಸದ್ದಿ ಬಂಗಾರಪ್ಪನವರು ಈ ರಾಜ್ಯ ಕಂಡ ವಿಶೇಷ ಮುಖ್ಯಮಂತ್ರಿಯಾಗಿದ್ದರು. ಅವರು ಮಾಡಿದ ಜನೋಪಯೋಗಿಯು ಕಾರ್ಯಗಳು ಇಂದಿಗೂ ರಾಜ್ಯದ ಜನತೆ ಸ್ಮರಿಸುವಂತೆ ಮಾಡಿದೆ. ಇತಂಹ ಧೀಮಂತ ವ್ಯಕ್ತಿಯನ್ನು ನಾವಿಂದೂ ಸ್ಮರಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಾಮಧಾರಿ ಮುಖಂಡ ರಾಜೇಂದ್ರ ನಾಯ್ಕ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಅಂಕೋಲಾದ ಬಂಗಾರಪ್ಪ ಅಬಿಮಾನಿಗಳ ಬಳಗದ ಅಧ್ಯಕ್ಷ ಉದಯ ನಾಯ್ಕ ಅವರು ಬಂಗಾರಪ್ಪನವರ ಹುಟು ಹಬ್ಬವನ್ನು ವಿವಿಧ ವಿದಾಯಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತ ಬಂದಿರುವದು ಮಾದರಿ ಸಂಗತಿಯಾಗಿದೆ ಎಂದರು.
ನಾಮಧಾರಿ ಕಟ್ಟಡ ಸಮಿತಿಯ ಅಧ್ಯಕ್ಷ ಎಮ್.ಪಿ. ನಾಯ್ಕ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ಡಿ.ಜಿ.ನಾಯ್ಕ, ಮೀನುಗಾರರ ಸಮಾಜದ ಪ್ರಮುಖ ರಾಜು ಹರಿಕಂತ್ರ, ಮುಸ್ಲಿಂ ಸಮಾಜದ ಪ್ರಮುಖ ನವಾಜ್ ಶೇಖ, ಗೌಡ ಸಮಾಜದ ಪ್ರಮುಖ ಪಾಂಡುರಂಗ ಗೌಡ, ನಾಮಧಾರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವಾನಂದ ನಾಯ್ಕ, ಸಮಾಜದ ಪ್ರಮುಖ ವೆಂಕಪ್ಪ ನಾಯ್ಕ, ಕಾರ್ಯಕ್ರಮದ ಸಂಘಟಕ ಬಂಗಾರಪ್ಪ ಅಬಿಮಾನಿಗಳ ಬಳಗದ ಅಧ್ಯಕ್ಷ ಉದಯ ನಾಯ್ಕ. ಹೊನ್ನೆಕೇರಿ, ನಿವೃತ್ತ ಶಿಕ್ಷಕ ಗೋಪಾಲ ಆಗೇರ, ನ್ಯಾಯವಾದಿ ಉಮೇಶ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ನಾಮಧಾರಿ ಸಮಾಜದ ಮುಖಂಡ ರಾಜೇಶ ಮಿತ್ರಾನಾಯ್ಕ ಸ್ವಾಗತಿಸಿ, ನಿರೂಪಿಸಿದರು.