Slide
Slide
Slide
previous arrow
next arrow

ಬೀದಿಬದಿಯ ಅತೀ ಸಣ್ಣ ವ್ಯಾಪಾರಿಗಳಿಗೂ ಸುಲಭ ರೀತಿಯಲ್ಲಿ ಸಾಲ…!

300x250 AD

ಕಾರವಾರ: ಕಾರಣಾಂತರದಿಂದ ಉದ್ಯೋಗ ಅರಸಿ ಉತ್ತರಕನ್ನಡ ಜಿಲ್ಲೆಗೆ ಬಂದಿದ್ದ ಮೈಸೂರಿನ ಯುವಕ ಕಿರಣ್ ಬೇರೆಯವರ ಕೈ ಕೆಳಗೆ ಕೆಲಸ ಮಾಡಿ ಬೇಸರಗೊಂಡು, ಸ್ವಂತ ಉದ್ಯೋಗ ಮಾಡಿ, ಸ್ವಾವಲಂಬಿ ಜೀವನ ಮಾಡಬೇಕು ಎನ್ನುವ ಕನಸಿಗೆ ಮೊದಲಿಗೆ ಎದುರಾದ ತೊಂದರೆ ಸ್ವ- ಉದ್ಯೋಗ ಆರಂಭಿಸಲು ಮೂಲ ಬಂಡವಾಳದ ಕೊರತೆ. ಯಾವುದೇ ಗ್ಯಾರಂಟಿ ಅಥವಾ ಆಸ್ತಿಯ ಖಾತ್ರಿಯಿಲ್ಲದೇ ಸಾಲ ಪಡೆದು ಸ್ವಾವಲಂಬಿ ಜೀವನ ನಡೆಸಲು ಈತನಿಗೆ ಸಹಾಯ ಮಾಡಿದ್ದು ಪಿ.ಎಂ ಸ್ವನಿಧಿ ಯೋಜನೆ..!

ಕಾರವಾರದ ಪಿಕಳೆ ರಸ್ತೆ ಬದಿಯಲ್ಲಿ ಸ್ವಂತ ಬಟ್ಟೆ ವ್ಯಾಪಾರ ನಡೆಸುವ ಕಿರಣ್ ಪ್ರತಿದಿನ 1200- 1500ರವರೆಗೆ ವ್ಯಾಪಾರ ನಡೆಸುತ್ತಿದ್ದು, 300ರಿಂದ 400 ರೂ. ಲಾಭಗಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದು, ಪಿಎಂ ಸ್ವನಿಧಿ ಯೋಜನೆಯ ಮೂಲಕ ರೂ.10000 ಗಳ ಸಾಲದ ನೆರವು ನನಗೆ 10 ಲಕ್ಷ ರೂ ಗಳನ್ನು ನೆರವು ನೀಡಿದ್ದು, ಸಾಲಕ್ಕೆ ಅರ್ಜಿ ಸಲ್ಲಿಸಿದ 15 ದಿನದಲ್ಲಿಯೇ ನನಗೆ ಸಾಲ ಮಂಜೂರಾಗಿದ್ದು, ನಿಗಧಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿ, ಪುನ: ಹೆಚ್ಚಿನ ಸಾಲ ಪಡೆದು ವ್ಯಾಪಾರವನ್ನೂ ಇನ್ನೂ ಹೆಚ್ಚಿನ ಅಭಿವೃಧ್ದಿಪಡಿಸುವ ಗುರಿ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈ ರೀತಿಯಾಗಿ ಹಲವು ಮಂದಿ ಪಿ.ಎಂ ಸ್ವ ನಿಧಿಯ ಪ್ರಯೋಜನ ಪಡೆದು ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ ಆದರೆ ಬದಲಾಗಿರುವ ಮಾರ್ಗಸೂಚಿಯನ್ವಯ ಸಾಲ ಪಡೆದವರಿಗಿಂತಲೂ ಇನ್ನೂ ಸಾಲ ಪಡೆಯಲು ಅರ್ಹರಿರುವವರ ಸಂಖ್ಯೆ ಅತ್ಯಧಿಕವಾಗಿದ್ದು, ಸೂಕ್ತ ಮಾಹಿತಿಯ ಕೊರತೆಯಿಂದ ಅವರಿಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ-ನಲ್ಮ್ ಅಭಿಯಾನದಡಿ ನಗರ ಪ್ರದೇಶದ ಬಡ ಜನರ ಜೀವನ ಮಟ್ಟ ಸುಧಾರಣೆಗೆ ಹಲವರು ಕಾರ್ಯಕ್ರಮಗಳನ್ನು ರೂಪಿಸಲಾಗಿರುತ್ತದೆ. ಅದರಲ್ಲಿ ನಗರ ಬೀದಿಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕವು ಒಂದು ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯು ಸಮಾಜದ ದುರ್ಬಲ ವರ್ಗದ ಕುಟುಂಬಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವುದರ ಜೊತೆಗೆ ಬೀದಿ ವ್ಯಾಪಾರಸ್ಥರ ಕೌಶಲ್ಯ ವೃದ್ಧಿಸುವುದು, ಕಿರು ಉದ್ಯಮ ಸ್ಥಾಪನೆಗೆ ಸಾಲ-ಸೌಲಭ್ಯ ಒದಗಿಸಲಿದೆ.

ಈ ಯೋಜನೆಯನ್ನು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಯ ಮುಖಾಂತರ ಗುರುತಿಸಲಾದ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ನಿಗದಿಪಡಿಸಿದ ಗುರಿಗಳಿಗೆ ತಕ್ಕಂತೆ ನಗರ ಸ್ಥಳೀಯ ಸಂಸ್ಥೆಗಳು ಪಿಎಂ ಸ್ವ-ನಿಧಿ ಪೊರ್ಟಲ್ ಮುಖಾಂತರ ಫಲಾನುಭವಿಗಳ ಅರ್ಜಿಗಳನ್ನು ಸಂಬಂಧಪಟ್ಟ ಬ್ಯಾಂಕುಗಳಿಗೆ ಅಪಲೋಡ್ ಮಾಡಲಾಗುತ್ತಿದೆ. ಬ್ಯಾಂಕುಗಳು ದಾಖಲೆಗಳನ್ನು ಪರಿಶೀಲಿಸಿ ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ ಮೊದಲನೇ ಹಂತದಲ್ಲಿ 10 ಸಾವಿರ, ಎರಡನೇ ಹಂತದಲ್ಲಿ 20 ಸಾವಿರ, ಮೂರನೇ ಹಂತದಲ್ಲಿ 50 ಸಾವಿರಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ. ಈ ಸಾಲಕ್ಕೆ 7% ಬಡ್ಡಿ ಫಲಾನುಭವಿಗಳಿಂದ ಇದಕ್ಕೆ ಮೇಲ್ಪಟ್ಟು ಸಂಬಂಧಿಸಿದ ಬ್ಯಾಂಕುಗಳಿAದ ಪಾವತಿಯಾಗಲಿದೆ.

ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಂದ 4451 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿದ್ದು, ಅದರಲ್ಲಿ 3998 ಬೀದಿ ವ್ಯಾಪಾರಿಗಳ ಸಾಲ ಮಂಜೂರಾಗಿದ್ದು, 3917 ಜನರಿಗೆ ಈಗಾಗಲೇ ಸಾಲ ಬ್ಯಾಂಕಿನಿಂದ ವಿತರಿಸಲಾಗಿರುತ್ತದೆ. ಆದರೆ ಪ್ರಸ್ತುತ ಬದಲಾದ ಮಾರ್ಗಸೂಚಿಯನ್ವಯ ಬೀದಿ ಬದಿ ವ್ಯಾಪರಿಗಳು ಮಾತ್ರವಲ್ಲದೆ, ಮನೆ ಮನೆಗೆ ದಿನ ಪತ್ರಿಕೆ ಹಂಚುವವರು, ಹಾಲು ಹಾಕುವವರು, ಎಳ ನಿರು ಮಾರುವವರು, ಹೂ ಮಾರುವವರು, ರಸ್ತೆ ಬದಿಯ ಚಪ್ಪಲಿ ಅಂಗಡಿಯವರು, ರಸ್ತೆ ಬಟ್ಟೆ ಮಾರಾಟ ಮಾಡುವವರು, ಸಣ್ಣ ಸಣ್ಣ ಗೂಡಂಗಡಿ ಮ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರು, ಮೀನು ಮಾರುವವರು ಅಲ್ಲದೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದಲ್ಲಿ ನಡೆಯುವ ಸಂತೆಗೆ ಬಂದು ವ್ಯಾಪಾರ ಮಾಡುವವರಿಗೂ ಸಹ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಎಲ್ಲಾ ವ್ಯಾಪಾರಿಗಳಿಗೆ ಮೊದಲ ಕಂತಿನಲ್ಲಿ 10000 ಸಾಲ ನೀಡಲಾಗುವುದು, ಇದನ್ನು 12 ಕಂತುಗಳಲ್ಲಿ ಶೇ.7 ಬಡ್ಡಿ ದರದಲ್ಲಿ ಮರುಪಾವತಿಸಿದ್ದಲ್ಲಿ ನಂತರ 20000 ಸಾಲ ದೊರೆಯುತ್ತಿದೆ ಅದನ್ನು 18 ಕಂತುಗಳಲ್ಲಿ ಮರುಪಾವತಿಸಿದಲ್ಲಿ 50000 ಸಾಲ ದೊರೆಯುತ್ತಿದೆ ಇದರ ಮರು ಪಾವತಿಯ ಅವಧಿ 36 ಕಂತುಗಳಾಗಿರುತ್ತದೆ.

300x250 AD

ಪಿಎಂ ಸ್ವ-ನಿಧಿ ಯೋಜನೆಗೆ ಸಂಬಂಧಪಟ್ಟಂತೆ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಫಲಾನುಭವಿಗಳೊಂದಿಗೆ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರನ್ನು ಸಂಪರ್ಕಿಸಿ ಸದರಿ ಯೋಜನೆಯ ಲಾಭವನ್ನು ಪಡೆಯಲು ನೆರವು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಬೀದಿ ಬದಿಯಲ್ಲಿ ಮತ್ತು ಮನೆ ಮನೆಗೆ ವಿವಿಧ ಸೌಲಭ್ಯ ಒದಗಿಸುವ ಅನೇಕ ಶ್ರಮಜೀವಿಗಳು ಪ್ರಾಮಾಣಿಕತೆಯಿಂದ ತಮ್ಮ ದೈನಂದಿನ ಉದ್ಯೋಗಳನ್ನು ಮಾಡುತ್ತಿದ್ದು, ಉದ್ಯೋಗ ಅಭಿವೃದ್ದಿಗೆ ಸೇರಿದಂತೆ ಮತ್ತಿತರ ಆರ್ಥಿಕ ಸಮಸ್ಯೆಯ ಕಾರಣ ಲೇವಾದೇವಿದಾರರು, ಖಾಸಗಿ ಪೈನಾನ್ಸ್ ಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಸಾಲ ಮರುಪಾವತಿಗೆ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಪಿ.ಎಂ ಸ್ವ ನಿಧಿ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ.

ಈ ಯೋಜನೆಗೆ ನೊಂದಣಿಯಾಗಿ ಅಗತ್ಯವಿರುವ ಸಾಲ ಪಡೆಯುವುದರಿಂದ, ವ್ಯಾಪಾರಸ್ಥರಿಗೆ ನಗರ ಸ್ಥಳೀಯ ಸಂಸ್ಥೆಯಿಂದ ಗುರುತಿನ ಕಾರ್ಡ್ ಮತ್ತು ಪ್ರಮಾಣಪತ್ರ ಕೂಡ ದೊರೆಯಲಿದ್ದು, ಇದುಅವರ ದೈನಂದಿನ ಉದ್ಯೋಗಕ್ಕೆ ಒಂದು ಅಧಿಕೃತ ಮಾನ್ಯತೆ ಕೂಡಾ ದೊರೆತಂತೆ ಆಗಲಿದೆ. ಅಲ್ಲದೆ ಈ ಯೋಜನೆಯ ಪ್ರಯೋಜನ ಪಡೆಯುವ ಮೂಲಕ ಸರ್ಕಾರದಿಂದ ಪ್ರಮುಖ 8 ಭದ್ರತಾ ಯೋಜನೆಗಳಾದ, ಪಿಎಂ ಸುರಕ್ಷಾ ಭಿಮಾ ಯೋಜನೆ, ಪಿಎಂ ಜನ-ಧನ ಯೋಜನೆ, ಪಿಎಂ ಜೀವನ ಜ್ಯೋತಿ ಭಿಮಾ ಯೋಜನೆ, ಪಿಎಂ ಶ್ರಮಯೋಗಿ ಮನಧನ ಯೋಜನೆ, ಪಿಎಂ ಕಾರ್ಮಿಕ ಕಾರ್ಡ್ ಯೋಜನೆ, ಪಿಎಂ ಜನನಿ ಸುರಕ್ಷಾ ಯೋಜನೆ, ಒನ್ ನೇಶನ್ ಒನ್ ರೇಶನ್ ಕಾರ್ಡ್ ಯೋಜನೆ, ಪಿಎಂ ಮಾತೃ ವಂದನಾ ಯೋಜನೆಯ ಪ್ರಯೋಜನ ಕೂಡಾ ದೊರೆಯಲಿದೆ. ಈ ಯೋಜನೆಗೆ ನಿರ್ಧಿಷ್ಟ ಗುರಿ ಇಲ್ಲದ ಕಾರಣ ಅರ್ಜಿ ಸಲ್ಲಿಸಿದ ಎಲ್ಲರಿಗೂ ಯೋಜನೆಯ ಪ್ರಯೋಜನ ಪಡೆಯಬಹುದಾಗಿರುವುದರಿಂದ ಜಿಲ್ಲೆಯ ಅರ್ಹ ಸಣ್ಣ ವ್ಯಾಪಾರಿಗಳು,ಮಾರಾಟಗಾರರು, ಸರ್ಕಾರದ ಆರ್ಥಿಕ ನೆರವಿನೊಂದಿಗೆ ಸ್ವಾವಲಂಬಿ ಉದ್ಯೋಗ ಮಾಡಬಹುದಾಗಿದೆ.

       — ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ

Share This
300x250 AD
300x250 AD
300x250 AD
Back to top