Slide
Slide
Slide
previous arrow
next arrow

ದಿ.ಬಂಗಾರಪ್ಪನವರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ: ಕಾಗೋಡ ತಿಮ್ಮಪ್ಪ

300x250 AD

ಹೊನ್ನಾವರ: ದಿ.ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಯೋಜನೆ ಜಾರಿಗೊಳಿಸಿದ್ದರು ಎಂದು ಮಾಜಿ ಸಭಾಪತಿ ಕಾಗೋಡ ತಿಮ್ಮಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ, ದಿ.ಎಸ್.ಬಂಗಾರಪ್ಪ ಪ್ರತಿಷ್ಠಾನ ವತಿಯಿಂಯದ ಪಟ್ಟಣದ ನಾಮಧಾರಿ ಸಂದ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಬಡವರು ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ತುಡಿತ ಹೊಂದಿರುವ ಅಪರೂಪದ ರಾಜಕಾರಣೆ ಬಂಗಾರಪ್ಪನವರಾಗಿದ್ದರು. ರಾಜಕಾರಣದ ಮೂಲಕ ಅಧಿಕಾರ ಹಿಡಿಯುದು ಮುಖ್ಯವಲ್ಲ. ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಮೂಲಕ ಜನಾನುರಾಗಿಯಾಗಿದ್ದ ರಾಜಕಾರಣೆ ಎಂದರೆ ತಪ್ಪಾಗಲಾರದು. ಅವರ ಆಡಳಿತ ಅವಧಿಯಲ್ಲಿ ನೀಡಿದ ಹಲವು ಯೋಜನೆಗಳು ಎಲ್ಲಾ ಸಮಾಜಕ್ಕೂ ಅನೂಕೂಲವಾಗಿದೆ. ವಯಸ್ಸಿನಲ್ಲಿ ತನಗಿಂತ ತುಸು ಕಡಿಮೆ ವಯಸ್ಸಿನವರಾದ ಬಂಗಾರಪ್ಪನವರನ್ನು ರಾಜಕಾರಣಕ್ಕೆ ನಾನೇ ಕರೆ ತಂದಿದ್ದೆ ಎತ್ತರಕ್ಕೆ ಬೆಳೆದು ಜನಪರ ಅಡಳಿತ ನಡೆಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದರು. ಅಧಿಕಾರ ರಾಜಕೀಯಕ್ಕೆ ಆಶೆ ಪಡದೇ ಹಠಕ್ಕಾಗಿ ಅಧಿಕಾರ ತ್ಯಜಿಸಿ ಸ್ವತಃ ಪಿ.ವಿ ನರಸಿಂಹ ರಾವ್ ಕೇಂದ್ರ ಸಚಿವರನ್ನಾಗಿ ಮಾಡುವುದಾಗಿ ಕರೆದರೂ ಅವಕಾಶವನ್ನು ಬಿಟ್ಟು ರಾಜಕೀಯ ಹೋರಾಟವನ್ನು ಮುನ್ನೆಡೆಸಿದ ಸ್ವಾಭಿಮಾನಿ ಹೋರಾಟಗಾರರಾಗಿದ್ದಾರೆ. ರೈತರ ಪಂಪಸೆಟ್ ಉಚಿತ ವಿದ್ಯುತ್ ಯೋಜನೆಯು ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಕುಟುಂಬಕ್ಕೆ ಪ್ರಯೋಜನವಾಗಿದೆ. ರಾಜ್ಯದ ಪ್ರತಿ ಭಾಗದಲ್ಲಿಯೂ ಅವರ ಅಭಿಮಾನಿಗಳು ಇಂದು ಇರುವುದು ಇವರ ಜನಪ್ರೀಯತೆ ತೋರಿಸಲಿದೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಮುಂದಿನ ತಲೆಮಾರಿಗೂ ಅನೂಕೂಲವಾಗಲಿ ಎಂದರು.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಅಧಿಕಾರಕ್ಕೆ ಕುರ್ಚಿಗೆ ಅಂಟಿ ಕುಳಿತುಕೊಳ್ಳದೇ ಜನಸಾಮನ್ಯರ ಧ್ವನಿಯಾಗಿ ಆಡಳಿತ ನಡೆಸಿದ ಹಿರಿಮೆ ಬಂಗಾರಪ್ಪನವರಿಗೆ ಸಲ್ಲುತ್ತದೆ. ಜನರ ಹೃದಯ ಅರಿತು ಕೆಲಸ ಮಾಡಿದವರು ಬಂಗಾರಪ್ಪ. ಆದ್ದರಿಂದ ಅವರ ವಿಶ್ವ ಆರಾಧನಾ, ಆಶ್ರಯ, ಪ್ರಸಿದ್ದ ಜನಪರ ಯೋಜನೆಗಳಾಗಿ ಇಂದೂ ಇವೆ.  ನಾಮಧಾರಿಗಳು ಜಿಲ್ಲೆಗೆ ನಾಯಕತ್ವ ನೀಡುವ ಶಕ್ತಿ ಹೊಂದಿದವರು. ಶೈಕ್ಷಣಿಕವಾಗಿ ರಾಜಕೀಯವಾಗಿ ಈ ಸಮಾಜದಿಂದ ಇನ್ನಷ್ಟು ಮುಂದೆ ಬರಬೇಕಿದೆ. ಬಂಗಾರಪ್ಪನವರ ಅಭಿಮಾನಿಗಳು, ಯುವಕರು ತಾಳ್ಮೆಯಿಂದ ಜನ ಸಂಪರ್ಕ ಸಾಧಿಸಿ ಬಂಗಾರಪ್ಪನವರ ಅಶೆಯನ್ನು ಸಾಕಾರಗೊಳಿಸಿ ಎಂದು ಕರೆ ನೀಡಿದರು.

300x250 AD

ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕೇವಲ ನಾಲ್ಕುವರೆ ವರ್ಷ ಅಧಿಕಾರ ಅನುಭವಿಸಿದರೂ ಮುಖ್ಯಮಂತ್ರಿಯಾಗಿ ಕೇವಲ ಎರಡು ವರ್ಷ ಮಾತ್ರ ಇದ್ದರು. ತಮ್ಮ ಕಿರಿದಾದ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ದೇಶದ ಇನ್ಯಾವ ಮುಖ್ಯಮಂತ್ರಿಗಳೂ ಸಾಧಿಸಿಲ್ಲ. ಬಂಗಾರಪ್ಪನವರು ಗ್ರಾಮೀಣ ವಿದ್ಯಾರ್ಥಿಗಳಿಗೆ  ಗ್ರಾಮೀಣ ಕೃಪಾಂಕ, ಶಾಲಾ ವಿದ್ಯಾರ್ಥಿಗಳಿಗೆ ಒಂದು ಹಾಜರಾತಿಗೆ ಒಂದು ರೂಪಾಯಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯತ್ ಹಾಗೂ ವಿಶ್ವ, ಆರಾಧನಾ ಯೋಜನೆಗಳು ಅತ್ಯುತ್ತಮ ಮಾದರಿ ಯೋಜನೆಗಳಾಗಿವೆ. ಪ್ರಜಾ ಪ್ರಭುತ್ವದ ಆಶಯದ ಅವರ ಹೋರಾಟ, ಆಡಳಿತ, ಸಿದ್ದಾಂತಗಳು, ಸಾಧನೆಗಳು, ಬದುಕು ಮತ್ತು ಅಶಯಗಳು ಮುಂದಿನ ಜನಾಂಗಕ್ಕೂ ದಾರಿ ದೀಪವಾಗಲೂ ಇಂತಹ ಕಾರ್ಯಕ್ರಮದಿಂದ ಸಾಧ್ಯ ಎಂದರು.

ಸಂಘದ ಅಧ್ಯಕ್ಷ ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ಯಾರ ಒಡನೆ ಭಿನ್ನಭಿಪ್ರಾಯ ಇದ್ದರೂ ಅವರನ್ನು ಕರೆಯಿಸಿ ಮಾತನಾಡುವ ಸ್ನೇಹವಂತರಾಗಿದ್ದರು. ತಾನು ಅವರ ಆಡಳಿತವನ್ನು ನೋಡಿದ್ದೇನೆ, ವಿರೋಧ ಪಕ್ಷದ ನಾಯಕನನ್ನಾಗಿ ನೋಡಿದ್ದೇನೆ ಆದರೆ ಅವರು ವಿರೋದ ಪಕ್ಷದ ನಾಯಕನಾಗಿ  ವಿಧಾನ ಸಭೆಯಲ್ಲಿ ನಡೆಸಿದ ಹೋರಾಟವನ್ನು ಹೆಚ್ಚು ಇಷ್ಟಪಡುತ್ತೇನೆ. ಕಾವೇರಿ ಸಮಸ್ಯೆ ಬಂದಾಗಲೆಲ್ಲ ಅವರ ನಾಯಕತ್ವ ಮತ್ತೆ ಮತ್ತೆ ನೆನಪಾಗುತ್ತಲೆ ಇದೆ ಎಂದರು.

ಮಾಜಿ ತಾ.ಪಂ.ಸದಸ್ಯ ಆರ್.ಪಿ.ನಾಯ್ಕ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಮಾಜಿ ಜಿ.ಪಂ.ಅಧ್ಯಕ್ಷ ಆರ್.ಎಸ್.ರಾಯ್ಕರ್, ಜಿಲ್ಲಾ ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ.ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top