Slide
Slide
Slide
previous arrow
next arrow

ಅಗಲಿದ ವೈದ್ಯ ಅವಧಾನಿಗೆ ನಾದ – ನುಡಿನಮನ

300x250 AD

ಹೊನ್ನಾವರ: ಇತ್ತೀಚೆಗೆ ನಿಧನರಾದ ತಾಲೂಕಿನ ಖ್ಯಾತ ವೈದ್ಯ ಡಾ.ಯು.ಕೆ.ಅವಧಾನಿಯವರಿಗೆ ಪಟ್ಟಣದ ಎಸ್‌ಡಿಎಂ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಕಣ್ಮರೆಯಾದ ಕಣ್ಬೆಳಕು ಎಂಬ ಕಾರ್ಯಕ್ರಮದಡಿಯಲ್ಲಿ ನಾದ-ನುಡಿ ನಮನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.        

ಪದವಿ ಕಾಲೇಜಿನ ಸಂಗೀತ ವಿಭಾಗದ ಉಪನ್ಯಾಸಕ ಪ್ರೊ.ಎನ್.ಜಿ.ಅನಂತಮೂರ್ತಿ , ಉಪನ್ಯಾಸಕಿ ಸಂಗೀತಾ ನಾಯ್ಕ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿಗಳಾದ  ನಿಹಾರಿಕಾ ಭಟ್, ವೀಜಯ್ ಬಂಢಾರ್ಕರ್,ಶ್ರೇಯಾ ಪೈ ಸಂಗೀತ ಕಾರ್ಯಕ್ರಮವನ್ನು ನೀಡಿ ನಾದ ನಮನವನ್ನು ಸಲ್ಲಿಸಿದರು.

ಹೊನ್ನಾವರ ಹವ್ಯಕ ಟ್ರಸ್ಟ ಖಜಾಂಚಿ ಎಲ್.ಐ.ಭಟ್ ಮಾತನಾಡಿ ಡಾ.ಅವಧಾನಿಯವರ  ಒಡನಾಟ, ಅವರ ಜೊತೆ ಕಾಲವನ್ನು ಕಳೆದ ಘಟನೆಗಳನ್ನು ಹಾಗೂ ಅವರ ವ್ಯಕ್ತಿತ್ವವನ್ನು ನೆರೆದವರ ಮುಂದೆ ತೆರೆದಿಟ್ಟರು. ಎಲ್ಲರಿಗೂ ಸ್ಪಂದಿಸುತ್ತಿದ್ದ ರೀತಿ ಎಲ್ಲರಿಗೂ ಮಾದರಿಯಾಗಿತ್ತು. ಅವರ ಆದರ್ಶವನ್ನು ನಾವೆಲ್ಲ ಪಾಲಿಸೋಣ ಎಂದರು.

ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯ ಡಾ.ಪಿ.ಎಂ.ಹೊನ್ನಾವರ ಮಾತನಾಡಿ ಒಳ್ಳೆಯ ನಂಬಿಕೆಯನ್ನು  ಹೊಂದಿದ್ದವರು ಯಾವತ್ತೂ ಮೌಲ್ಯವನ್ನು ಹೊಂದಿರುತ್ತಾರೆ. ಶಿಸ್ತನ್ನು ರೂಢಿಸಿಕೊಂಡ ಡಾ.ಅವಧಾನಿಯವರು ಎಲ್ಲರ ಜನ ಮಾನಸದಲ್ಲಿ ಉಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಮಾತನಾಡಿ, ಡಾ.ಅವಧಾನಿಯವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು. ಇದೇವೇಳೆ ಎಂ.ಪಿ.ಇ.ಸೊಸೈಟಿಯ ಸದಸ್ಯರು, ಉಪನ್ಯಾಸಕರು, ಅವಧಾನಿಯವರ ಕುಟುಂಬದ  ಹಿತೈಷಿಗಳು ಮತ್ತು ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು, ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕನ್ನಡ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ್ ಪ್ರಾಸ್ತಾವಿಕ ಮಾತನಾಡಿ ಉಪನ್ಯಾಸಕ ಪ್ರಶಾಂತ್ ಹೆಗಡೆ ಮೂಡಲಮನೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top