Slide
Slide
Slide
previous arrow
next arrow

ನವರಾತ್ರಿ: ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

300x250 AD

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಒಂದಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗಿತು.    

ಸಹ್ಯಾದ್ರಿ ತಪ್ಪಲಿನಂತಿರುವ ಪ್ರಕೃತಿ ಸೌಂದರ್ಯದ ನಡುವಿನ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನವರಾತ್ರಿ ಆಚರಣೆ ಸಂಪನ್ನಗೊಂಡಿದೆ. ಸಪ್ತಶತಿ ಪಾರಾಯಣ, ಉಡಿ ಸೇವೆ, ಆರತಿ ಕುಂಕುಮಾರ್ಚನೆ, ಸರ್ವಸೇವೆ, ವಿವಿಧ ಬಗೆಯ ಹೋಮಗಳ ಮೂಲಕ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸೇವಾ ಕೌಂಟರ್ ಜೊತೆಗೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಸೇವೆ ಸಲ್ಲಿಸಲು ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದಂತೆ ಸ್ವಯಂ ಸೇವಕರನ್ನು ಆಡಳಿತ ಮಂಡಳಿಯವರು ನಿಯೋಜಿಸಿದ್ದರು. ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು.

ಮುಂಜಾನೆ ತಿಂಡಿ, ತಂಪು ಪಾನೀಯ, ಮಧ್ಯಾಹ್ನ ಹಾಗೂ ರಾತ್ರಿ ಪೂಜೆಯ ಬಳಿಕ ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರಿಸುಮಾರು ಒಂದುಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿರುವುದು ವಿಶೇಷವಾಗಿತ್ತು. ಅರೇಅಂಗಡಿಯಿಂದ ದೇವಾಲಯಕ್ಕೆ ತೆರಳಲು ಆಟೋ, ಕಾರು ರಿಯಾಯತಿ ದರದಲ್ಲಿ ಇರುದರಿಂದ ಬಸ್ ಹಾಗೂ ಟೆಂಪೋ ಮೂಲಕ ಆಗಮಿಸಿದ ಭಕ್ತರಿಗೂ ದೇವಾಲಯಕ್ಕೆ ತೆರಳಲು ಅನುಕೂಲವಾಯಿತು. ವಿಜಯದಶಮಿಯ ದಿನದಂದು ಅರೇಅಂಗಡಿ ಸರ್ಕಲ್ ಸಮೀಪ ಯುವಕರು ಒಂದಾಗಿ ಆಗಮಿಸಿದ ಭಕ್ತರಿಗೆ ಉಚಿತವಾಗಿ ಮಧ್ಯಾಹ್ನದವರೆಗೆ ತಂಪು ಪಾನೀಯ ವಿತರಣೆ ಮಾಡಿದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಯಿತು.

300x250 AD

Share This
300x250 AD
300x250 AD
300x250 AD
Back to top