Slide
Slide
Slide
previous arrow
next arrow

ನವರಾತ್ರಿಯಿಂದ ಶಿಷ್ಟ ಶಕ್ತಿ ಬೆಳೆಸುವ ಸಂದೇಶ: ಶಾಂತಾರಾಮ ಸಿದ್ದಿ

300x250 AD


ಯಲ್ಲಾಪುರ: ನಮ್ಮೊಳಗಿನ ದುಷ್ಟಶಕ್ತಿಯನ್ನು, ಅಜ್ಞಾನವನ್ನು ದೂರ ಮಾಡಿ ಶಿಷ್ಟ ಶಕ್ತಿ ಬೆಳೆಸುವ ಸಂದೇಶ ಸಾರುವ ಹಬ್ಬವೇ ನವರಾತ್ರಿ. ಈ ದಸರಾ ಉತ್ಸವ ಮನುಷ್ಯನ ಬದುಕಿಗೆ ಉತ್ತಮ ಪಾಠ ಕಲಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು.

ತಾಲೂಕಿನ ಇಡಗುಂದಿಯ ಶ್ರೀ ರಾಮಲಿಂಗ ದೇವಸ್ಥಾನದ ಸಭಾಭವನದಲ್ಲಿ ಶರನ್ನವರಾತ್ರಿ ಉತ್ಸವದ ನವಮಿಯಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಇಡೀ ದೇಶದಲ್ಲಷ್ಟೇ ಅಲ್ಲದೇ ಹೊರದೇಶದಲ್ಲಿಯೂ ನವರಾತ್ರಿ ಉತ್ಸವ ನಡೆಯುತ್ತದೆ. ನವರಾತ್ರಿ ದುಷ್ಠಶಕ್ತಿಯನ್ನು ಸಂಹರಿಸಿ ವಿಜಯದ ಸಂದೇಶವನ್ನು ಬೀರುತ್ತದೆ ಎಂದರು.
ನಮ್ಮೊಳಗೆ ದುಷ್ಟಶಕ್ತಿ, ಸಮಾಜಘಾತುಕ ಶಕ್ತಿಯನ್ನು ದಮನ ಮಾಡಿ ರಾಮನ ಗುಣ ಬೆಳೆಸಿಕೊಳ್ಳಬೇಕು. ಸಮಾಜವನ್ನು ಜಾಗೃತಗೊಳಿಸಿ ಸಾಮರಸ್ಯ, ಪರಿಶುದ್ಧ ಸಮಾಜ ನಿರ್ಮಾಣ ಆಗಬೇಕು. ಧರ್ಮದ ಮೂಲಕ ಸಮಾಜ ಉಳಿಸುವ ಕೆಲಸ ನಡೆಯಬೇಕು ಎಂದರು.

ಪಂಚಾಯತ್ ರಾಜ್ ವಿಕೇಂದ್ರಿಕರಣ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಡಗುಂದಿ ಶ್ರೀ ರಾಮಲಿಂಗ ದೇವಸ್ಥಾನ ಆಗಮೋಕ್ತ ಸ್ಥಳ. ಇಲ್ಲಿ ದೇವರ ಸಮುಚ್ಛಯವೇ ಇದೆ ಎಂದರು. ನವರಾತ್ರಿ ಉತ್ಸವದಲ್ಲಿ ಜಗನ್ಮಾತೆ ತಾಯಿಯನ್ನು ಆರಾಧಿಸುತ್ತೇವೆ. ಹಿಂದೂಗಳ ಹಬ್ಬಕ್ಕೆ ಖುಷಿಗಳು ವಿಶೇಷ ವಿನ್ಯಾಸ ಮಾಡಿದ್ದಾರೆ. ಹಬ್ಬದಲ್ಲಿ ಮಾಡುವ ಖ್ಯಾದಕ್ಕೂ ಸಹ ವೈಜ್ಞಾನಿಕತೆಯಿದೆ ಎಂದರು.

300x250 AD

ಅಡಿಕೆ ವರ್ತಕ ಡಿ.ಶಂಕರ ಭಟ್ಟ, ಪುರೋಹಿತರಾದ ವೇ.ಮೂ. ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ, ಗ್ರಾಪಂ ಸದಸ್ಯ ವಿ.ಎನ್.ಭಟ್ಟ ಏಕಾನ್, ತಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಆಡಳಿತೆದಾರ ಮಂಜುನಾಥ ಕೆರೆಗದ್ದೆ, ಶಾನಭೋಗ ಸುಬ್ರಾಯ ಭಟ್ಟ ಮೂಲೇಮನೆ ಮುಂತಾದವರು ಉಪಸ್ಥಿತರಿದ್ದರು. ವಿ.ಎನ್.ಭಟ್ಟ ಸಾಲೇಮಕ್ಕಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವಿನಿಯೋಗ ಕೆಲಸದಲ್ಲಿ ತೊಡಗಿಕೊಂಡಿರುವ ಹಿರಿಯರಾದ ರಾಮಾ ಗುಬ್ಬ ಗೌಡ ಹಾಗೂ ನಾರಂಗಿ ನಾರಾಯಣ ದೇವಳಿ ಅವರನ್ನು ಸನ್ಮಾನಿಸಲಾಯಿತು. ನಂತರ ನುರಿತ ಕಲಾವಿದರಿಂದ ಲವಕುಶ ಆಖ್ಯಾನದ ಯಕ್ಷಗಾನ ಪ್ರದರ್ಶನಗೊಂಡಿತು.

ವೈವಿಧ್ಯ ಕಾರ್ಯಕ್ರಮಗಳ ವಿಶೇಷ:
ಇಡಗುಂದಿ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ನವರಾತ್ರಿಯುದ್ದಕ್ಕೂ ಧಾರ್ಮಿಕ ಹಾಗೂ ವೈವಿಧ್ಯ ಸಾಂಸ್ಕೃತಿಕ, ಮತ್ತು ನಿತ್ಯವೂ ಸಭಾ ಕಾರ್ಯಕ್ರಮಗಳು ನಡೆದವು. ಭಜನೆ, ತಾಳಮದ್ದಲೆ, ಕೀರ್ತನೆ, ಸಂಗೀತ, ಭರತನಾಟ್ಯ, ವಾದನ ಮುಂತಾದ ಸಾಂಸ್ಕೃತಿಕ ವಿಶೇಷತೆಗಳು ಉತ್ಸವಕ್ಕೆ ಮೆರಗು ನೀಡಿದವು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಿತು. ಇದರ ಜತೆಯಲ್ಲಿ ನಿತ್ಯ ದೇವಿ ಪಾರಾಯಣ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿದವು. . ಭಕ್ತರು ಉಡಿ, ಕುಂಕುಮಾರ್ಚನೆ ಸೇವ ಸಲ್ಲಿಸಿದರು. ದಶಮಿಯಂದು ಬನ್ನಿ ಪೂಜೆ, ಪಲ್ಲಕ್ಕಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು ಆಡಳಿ ಕಮೀಟಿ, ವಿನಿಯೋಗದಾರರು, ಊರವರು ಹಾಗೂ ಭಕ್ತರು ಪಾಲ್ಗೊಂಡರು.

Share This
300x250 AD
300x250 AD
300x250 AD
Back to top