Slide
Slide
Slide
previous arrow
next arrow

ಕೆಎಲ್‌ಎಸ್ ಮಹಾವಿದ್ಯಾಲಯದಲ್ಲಿ ‘ಲಕ್ಷ್ಯ್-2023’ ಕಾರ್ಯಕ್ರಮ

300x250 AD

ಹಳಿಯಾಳ: ಇಲ್ಲಿನ ಕೆಎಲ್‌ಎಸ್ ಬಿಸಿಎ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನದ ಲಕ್ಷ್ಯ್-2023 ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದ ಕೈಗಾರಿಕಾ ಸಂಶೋಧನೆ ಅಭಿವೃದ್ಧಿ ಹಾಗೂ ಸಲಹಾ ವಿಭಾಗದ ಡೀನ್ ಹಾಗೂ ಎಮ್‌ಸಿಎ ವಿಭಾಗ ಪ್ರಾಧ್ಯಾಪಕಿ ಡಾ.ಶ್ವೇತಾ ಗೌಡರ್, ವಿದ್ಯಾರ್ಥಿಗಳಿಗೆ ಗುರಿ, ಕೌಶಲ್ಯ, ಜ್ಞಾನದ ಅವಶ್ಯಕತೆ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.

ಕೆಎಲ್‌ಎಸ್ ವಿಡಿಐಟಿಯ ಪ್ರಾಚಾರ್ಯರಾದ ಡಾ.ವಿ.ಎ. ಕುಲಕರ್ಣಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಿಕ್ಷಿತರಾದಂತೆ ಸಮಾಜ ನಮ್ಮ ಮೇಲೆ ಹೆಚ್ಚಿನ ನಿರೀಕೆಯನ್ನು ಹೊಂದಿರುತ್ತದೆ. ಅದರಂತೆ ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬುದರ ಬಗ್ಗೆ ಹೇಳಿದರು. ಕಾಲೇಜು ಪ್ರಾಚಾರ್ಯರಾದ ಶ್ರೀನಿವಾಸ ಪ್ರಭುರವರು ಪ್ರಾಸ್ತಾವಿಕವಾಗಿ ಬಿಸಿಎ ಕೋರ್ಸಿನ ಮಹತ್ವ, ಫಲಿತಾಂಶ ಹಾಗೂ ಮುಂದಿನ ಲಕ್ಷ್ಯದ ಬಗ್ಗೆ ಹೇಳಿದರು.

300x250 AD

ಬಿಸಿಎ ಸಂಯೋಜಕರಾದ ಪ್ರೊ.ದೀಪಾ ನಾಯಕ ವೇದಿಕೆ ಮೇಲಿದ್ದರು. ಸವಿತಾ ಯಕ್ಕುಂಡಿ, ಮೇಘಾ ತೋರಸ್ಕರ ಸ್ವಾಗತಿಸಿದರು. ಸುಜಲ ಸಾಮಂತ ನಿರೂಪಿಸಿದರು, ಪ್ರೀತಿ ಗೌಡಾ ವಂದಿಸಿದರು. ದಿಶಾ ತಿಪ್ಪನ್ನವರ ಭರತನಾಟ್ಯ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಯೋಜಕರಾದ ಪ್ರೊ.ಮಾಧವ ಸುರತ್ಕರ, ತರಬೇತಿ ಹಾಗೂ ಉದ್ಯೋಗ ಕೇಂದ್ರದ ಸಂಯೋಜಕರಾದ ಪ್ರೊ.ಜ್ಯೋತಿ ಎಲ್ ಕುರಿ, ಕ್ರೀಡಾ ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ ಕಾಜಗಾರ, ಕೌಛೇರಿ ಅಧಿಕ್ಷಕರಾದ ವಿನಾಯಕ ನಾಯ್ಕ, ಪ್ರಾಧ್ಯಾಪಕರಾದ ಸಂಗೀತಾ ಪ್ರಭು, ಮಿನಾಜ್ ಶೇಕ್, ಮೆಹ್ತಾಬ್ ಶೇಕ್, ಪವನ ಚಿಪ್ಪಲಕಟ್ಟಿ, ಅಕ್ಷತಾ ಹುಲಿಕೇರಿ, ಆದಿತ್ಯ ಮುಳೆ ಹಾಗೂ ಶಾಂತಾರಾಮ ಚಿಬ್ಬುಲಕರರವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top