ಹಳಿಯಾಳ: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆರತಿ ತಟ್ಟಿ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಬಗೆ ಬಗೆಯ ವಿನ್ಯಾಸದ ಆರತಿ ತಟ್ಟೆಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ವಿವಿಧ ಬಗೆಯ ಹೂವು, ಧಾನ್ಯ, ಬಣ್ಣ ಹಾಗೂ ಕಾಳು, ಎಲೆ ದೀಪಗಳಿಂದ ಕೂಡಿದ ಚಿತ್ತಾಕರ್ಷಕ ತಟ್ಟೆಗಳು ದೇವಿಯ ಆರಾಧನೆಯನ್ನು ಸಾರುವಂತಿತ್ತು.
ಸಂಗೀತಾ ಪ್ರಭು ನಿರ್ಣಾಯಕರಾಗಿ ಆಗಮಿಸಿ ಮೆಚ್ಚುಗೆ ಸೂಚಿಸಿದರು. ಸ್ಪರ್ಧೆಯನ್ನು ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಡಿ.ಡಿ.ನಾಯಕ್, ರವಿ ಧೂಮಗೋಲ್ಕರ ಹಾಗೂ ರೋಹಿಣಿ ಪಾಟೀಲ್ ಸಂಘಟಿಸಿದ್ದರು.