ಸಿದ್ಧಾಪುರ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿರ್ಧಾರದಂತೆ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ, ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನ ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನ ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಸಿದ್ದಾಪುರ ತಾಲೂಕಿನ ನಿಲ್ಕುಂದ, ತಂಡಾಗುಂಡಿ ಮತ್ತು ಹೆಗ್ಗರಣೆ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಮನವಿ ನೀಡಲಾಯಿತು.
ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಸಿದ್ಧಾಪುರ ತಾಲೂಕಿನ, 23 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, 98 ಹಳ್ಳಿಗಳನ್ನ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದ್ದು, ಇವುಗಳನ್ನ ಪರಿಸರ ಸೂಕ್ಷ್ಮ ಪ್ರದೇಶದಿಂದ ಮುಕ್ತಗೊಳಿಸಲು ನಿರ್ಣಯಿಸಲು ನಿಯೋಗವು ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಆಗ್ರಹಿಸಿತು.
ಜಿಲ್ಲಾ ಸಂಚಾಲಕರಾದ ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳಿ, ನಾಗಪತಿ ಗೌಡ, ದ್ಯಾವ ಗೌಡ ಅವರ ನೇತ್ರತ್ವದಲ್ಲಿ ಶ್ರೀಧರ ನಾಯ್ಕ ಡೊಂಬೆ, ಈಶ್ವರ ಗೌಡ ಕಲ್ಲಗದ್ದೆ, ಪ್ರಶಾಂತ ನಾಯ್ಕ ಬೀರಿನಜಡ್ಡಿ, ಮಾಭ್ಲೇಶ್ವರ ಗೌಡ ಸೂಳಗಾರ, ಸೂರಜ್ ನಾಯ್ಕ ಬೀರಿನಜಡ್ಡಿ, ಚಂದ್ರಶೇಖರ್ ಗೌಡ ಹೊನ್ನಕೊಪ್ಪ, ಮಹೇಶ ನಾಯ್ಕ ಜೋಗಿನಮನೆ ಮುಂತಾದ ಹೋರಾಟಗಾರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಂಡಾಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷೆ ಪದ್ಮಾವತಿ ಎಮ್ ಗೌಡ, ಉಪಾಧ್ಯಕ್ಷೆ ಶಕುಂತಲಾ ತಿಮ್ಮ ಹರಿಜನ, ಸದಸ್ಯರಾದ ಬೀರಾ ಕೆ ಗೌಡ, ತಾರಾ ಹರಿಜನ, ನಿಲ್ಕುಂದ ಕಾರ್ಯದರ್ಶಿ ಜಿಟಿ ಹೆಗಡೆ, ಹೆಗ್ಗರಣಿ ಗ್ರಾಮ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಹರಿಜನ, ಸದಸ್ಯರಾದ ಬಾರಿಸಾಬ ಉಪಸ್ಥಿತರಿದ್ದರು.
ಸಿದ್ದಾಪುರ ತಾಲೂಕ- 98ಪರಿಸರ ಸೂಕ್ಷ್ಮ ಹಳ್ಳಿಗಳು: ಸಿದ್ದಾಪುರ ತಾಲೂಕಿನ ನಿಲ್ಕುಂದ ಗ್ರಾಮ ಪಂಚಾಯಿತಿಯಲ್ಲಿ 5 ಹಳ್ಳಿ, ತಂಡಾಗುಂಡಿ 4, ಹೆಗ್ಗರಣೆ 4, ಕಾನಸೂರ 6, ಬಿದ್ರಕಾನ್ 6, ಕೊಲಸಿರ್ಸಿ 7, ಕಾನಗೋಡ 4, ಬಿಳಗಿ 1, ಇಟಗಿ 3, ವಾಜಗೋಡ 6, ದೊಡ್ಮನೆ 11, ಹಲಗೇರಿ 9, ಶಿರಲಗಿ 1, ಕ್ಯಾದಗಿ 3, ಕೊರ್ಲಕೈ 3, ಹೇರೂರ್ 2, ಹಾರ್ಸಿಕಟ್ಟಾ 7, ಹಸರಗೋಡ 5, ಸೊವಿನಕೊಪ್ಪ 4, ಕವಂಚೂರು 1, ತ್ಯಾಗ್ಲಿ 5, ಮನಮನೆ 1 ಹಳ್ಳಿ ಹೀಗೆ ಸಿದ್ದಾಪುರ ತಾಲೂಕಿನಲ್ಲಿ ಒಟ್ಟು 98 ಹಳ್ಳಿಗಳು ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ.