ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯು ದಾಂಡೇಲಿಯ ವಿಟಿಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದ ಜೊತೆ ಒಡಂಬಡಿಕೆ ಮಾಡಿಕೊಂಡಿತು. ಈ ಒಡಂಬಡಿಕೆಯ ಮುಖಾಂತರ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಮತ್ತು ಕೈಗಾರಿಕಾ ಅನುಭವಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಪಡೆದುಕೊಳ್ಳಬಹುದಾಗಿದೆ. ವಿ.ಟಿ.ಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಲಹಾ ಸಮಿತಿ ಸಭೆಯಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಆರ್.ವಿ.ದೇಶಪಾಂಡೆ ಅವರು ದಾಂಡೇಲಿಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಒದಗಿಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಸದುಪಯೋಗಗೊಳಿಸಿಕೊಳ್ಳಲು ಕರೆ ನೀಡಿದರು. ವಿಟಿಯು ಬೆಳಗಾವಿಯ ಕುಲಪತಿಗಳಾದ ಡಾ.ವಿದ್ಯಾಶಂಕರ್ ಎಸ್. ಮಾತನಾಡಿ, ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಉನ್ನತೀಕರಣಕ್ಕಾಗಿ ಹೆಚ್ಚಿನ ತರಬೇತಿಗಳನ್ನು ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಕೆಎಲ್‌ಎಸ್ ವಿಡಿಐಟಿ ಪ್ರಾಂಶುಪಾಲ ಡಾ.ವಿ.ಎ.ಕುಲಕರ್ಣಿ ಮಾತನಾಡುತ್ತ, ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸಿಎನ್‌ಸಿ ಮಶಿನ್ ಆಪರೇಶನ್ಸ್ ಮತ್ತು ಕಂಪ್ಯೂಟರ್ ಹಾಡ್ವೇðರ್ ಎಂಡ್ ನೆಟ್ವರ್ಕಿಂಗ್ ವಿಷಯಗಳಲ್ಲಿ ಹೆಚ್ಚಿನ ತರಬೇತಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಕೇಂದ್ರದ ಸಲಹಾ ಸಮಿತಿ ಸದಸ್ಯರುಗಳಾದ ನಾರಾಯಣ ಠೋಸುರ್, ಚೈತನ್ಯ ಕುಲಕರ್ಣಿ, ಸೋನಿಯಾ ನೇತಲ್ಕರ್, ವೆಸ್ಟ್ಕೋಸ್ಟ್ ಪೇಪರ್ ಮಿಲ್ಸ್ನ ಕೆ.ಜೆ.ಗಿರಿರಾಜ್, ಬೆಳಗಾವಿಯ ಸರ್ವೋ ಕಂಟ್ರೋಲ್ ಲಿ.ನ ಪ್ರದೀಪ ಚಿಕ್ಕಮಠ್, ವಿಟಿಯು ಕೌಶಲ್ಯಾಭಿವೃದ್ಧಿ ಯೋಜನೆಯ ನಿರ್ದೇಶಕಿ ಡಾ.ಸಂಧ್ಯಾ ಅಣ್ವೇಕರ್, ದಾಂಡೇಲಿಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ.ವಿಜೇತ ಸ್ವಾದಿ ಉಪಸ್ಥಿತರಿದ್ದರು. ವಿಟಿಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ದಾಂಡೇಲಿಯೊ0ದಿಗೆ ಒಡಂಬಡಿಕೆ ಮಾಡಿಕೊಂಡಿರುವ ಪ್ರಥಮ ಮಹಾವಿದ್ಯಾಲಯ ವಿಡಿಐಟಿ ಆಗಿದೆ.