Slide
Slide
Slide
previous arrow
next arrow

ನಾಮಧಾರಿ ಸಮಾಜಕ್ಕೆ ನ್ಯಾಯ ಕೊಡಿಸುವುದೇ ಮುಖ್ಯ ಉದ್ದೇಶ: ಪ್ರಣವಾನಂದ

300x250 AD

ಅಂಕೋಲಾ: ರಾಜ್ಯದ ಈಡಿಗ ನಾಮಧಾರಿಗಳ ಘನತೆ ಗೌರವವನ್ನು ಎತ್ತಿ ಹಿಡಿಯುವುದರ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸೌಲಭ್ಯ ಹಾಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವುದೇ ನನ್ನ ಜವಾಬ್ದಾರಿ. ಇಲ್ಲಿ ನನ್ನ ಪ್ರಾಣಕ್ಕಿಂತ ಸಮಾಜ ಮುಖ್ಯ. ಕೆಲವರು ಬಾಯಿ ಚಪಲಕ್ಕಾಗಿ ಮಾತನಾಡಿದರೆ ಅಂತವರಿಗೆ ರಾಜೇಂದ್ರ ನಾಯ್ಕ ಸೇರಿದಂತೆ ಹಲವರಿಗೆ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಪ್ರಣವಾನಂದ ಶ್ರೀ ಹೇಳಿದರು.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಈಡಿಗ ಮಹಾಮಂಡಳಿ, ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ನೇತೃತ್ವದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸಮಾಜದಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಣವಾನಂದ ಸ್ವಾಮೀಜಿಯವರು ಈ ಕುರಿತು ಮಾತನಾಡಿದರು.

ರಾಷ್ಟ್ರೀçÃಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿ.ನಾಯ್ಕ ಮಾತನಾಡಿ, ಸೆ.9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ನಮ್ಮ ಸಮುದಾಯದ ಪೂರ್ವಭಾವಿ ಸಭೆಗೆ ಆಗಮಿಸಿದ ಜನರನ್ನು ನೋಡಿ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಈ ಸಂಘಟನೆಯನ್ನು ಒಡೆದು ಹಾಕಬೇಕು ಎನ್ನುವ ಮನಸ್ಥಿತಿಗೆ ಬಂದ ಕೆಲವರು ಸಮಾಜದವರನ್ನೇ ಎತ್ತು ಕಟ್ಟಿ ಅವಹೇಳನಕಾರಿ ಹೇಳಿಕೆ ನೀಡುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಸ್ವಾಮೀಜಿಯವರು ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಇಂತವರ ಹೆಸರನ್ನು ಕೆಡಿಸಲು ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

300x250 AD

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಘಟಕದ ಅಧ್ಯಕ್ಷ ದಾಮೋದರ ಜಿ.ನಾಯ್ಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೀಯ ಕಾರ್ಯದರ್ಶಿ ಡಾ.ಮಂಚೇಗೌಡ ಬಿ.ಎಚ್., ರಾಜ್ಯಾಧ್ಯಕ್ಷ ಸಂತೋಷಕುಮಾರ, ಗೌರವಾಧ್ಯಕ್ಷ ಸತೀಶ ಗುತ್ತೆದಾರ, ಹೆಚ್.ವೈ.ಆನಂದ, ರಾಜ್ಯ ಕಾರ್ಯದರ್ಶಿ ಜಿತೇಂದ್ರ ಸುವರ್ಣ, ವೆಂಕಟೇಶ ಗುಂಡನೂರು, ಮಹಾದೇವಪ್ಪ ಮೈಸೂರು, ವಸಂತಕುಮಾರ, ಉ.ಕ. ಜಿಲ್ಲಾ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಡಾ.ನಾಗೇಶ ನಾಯ್ಕ, ಅಂಕೋಲಾ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ, ಉಪಾಧ್ಯಕ್ಷ ರಮೇಶ ಎನ್.ನಾಯ್ಕ, ಖಜಾಂಚಿ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top