Slide
Slide
Slide
previous arrow
next arrow

10 ಕಿ.ಮೀ.ಮ್ಯಾರಥಾನ್: ಕೆಎಲ್‌ಇ ವಿದ್ಯಾರ್ಥಿನಿ ಚಂದ್ರಿಕಾ ಪ್ರಥಮ

300x250 AD

ಅಂಕೋಲಾ: ಭಾರತೀಯ ನೌಕಾಪಡೆ ಆಯೋಜಿಸಿದ್ದ ಕಾರವಾರ ರನ್ ಮತ್ತು ಸೈಕ್ಲೋನ್ 2023ರ ಮ್ಯಾರಥಾನ್‌ನ 10 ಕಿ.ಮೀ. ವಿಭಾಗದಲ್ಲಿ ಕೆಎಲ್‌ಇ ಪದವಿ ಕಾಲೇಜಿನ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿನಿ ಚಂದ್ರಿಕಾ ಎಸ್.ಗೌಡ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಇವಳ ಈ ಸಾಧನೆಗೆ ಭರತ ಅಕಾಡೆಮಿ ತರಬೇತುದಾರ ಸುಧೀರ ನಾಯ್ಕ, ಕೆಎಲ್‌ಇ ಸಂಸ್ಥೆಯ ಬೆಳಗಾವಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಅಂಕೋಲಾ ಸ್ಥಾನಿಕ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ, ಸಂಯೋಜಕ ಆರ್.ನಟರಾಜ, ಆಡಳಿತಾಧಿಕಾರಿ ಡಾ.ಮಿನಲ್ ನಾರ್ವೇಕರ, ಪ್ರಾಚಾರ್ಯ ಅಶ್ವತ್ಥನಾರಾಯಣ ಎಸ್.ಹೆಗಡೆ, ಬೋಧಕ- ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top