Slide
Slide
Slide
previous arrow
next arrow

ವಿದ್ಯುತ್ ವ್ಯತ್ಯಯ: ಹೆಸ್ಕಾಂ ನೀಡಿದ ಮಾಹಿತಿ ಇಲ್ಲಿದೆ..

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಹಾಗೂ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಹಾಗೂ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.

ಅ.18, ಬುಧವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವರೆಗೆ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಇಸಳೂರು, ದಾಸನಕೊಪ್ಪ ಫೀಡರ ಹಾಗೂ ಗ್ರಾಮೀಣ-1 ಶಾಖಾ ವ್ಯಾಪ್ತಿಯ ದಾಸನಕೊಪ್ಪ 33 ಕೆವಿ ಉಪಕೇಂದ್ರದಿಂದ ಹೊರಡುವ ಬದನಗೋಡ 11 ಮಾರ್ಗದ ದಾಸನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅ. 19, ಗುರುವಾರ ಹಾಗೂ ಅ. 20, ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆ ವರೆಗೆ ಕೆ.ಎಚ್.ಬಿ ಮಾರ್ಗದ ಕಸ್ತೂರಬಾನಗರ, ಕೆ.ಎಚ್.ಬಿ ಕಾಲೋನಿ, ಫಾರೆಸ್ಟ ಕಾಲೋನಿ, ವಿವೇಕಾನಂದನಗರ, ಲಂಡಕನಹಳ್ಳಿ, ಸ್ಟೇಡಿಯಂ ಭಾಗದಲ್ಲಿ ಹಾಗೂ ಅ.21, ಶನಿವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ಗ್ರಾಮೀಣ-1 ಶಾಖಾ ವ್ಯಾಪ್ತಿಯ ದಾಸನಕೊಪ್ಪ 33 ಕೆವಿ ಉಪಕೇಂದ್ರದಿಂದ ಹೊರಡುವ ಬದನಗೋಡ 11 ಮಾರ್ಗದ ದಾಸನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.

300x250 AD

ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ಇವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top