ಶಿರಸಿ: ಸ್ಕೊಡ್ವೆಸ್ ಸಂಸ್ಥೆ ಶಿರಸಿ ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್ ಸಹಯೋಗದಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಹಮ್ಮಿಕೊಂಡಿದ್ದ ದಸರಾ ರಜಾ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಯಿತು.
ಶಿರಸಿ ತಾಲೂಕಿನ ಹುತ್ತ್ಗಾರ್, ಹುಲೇಕಲ್, ಕೋರ್ಲಕಟ್ಟಾ, ದೊಡ್ನಳ್ಳಿ, ಮಳಲಿ ಹಾಗೂ ಶಿರಸಿ ನಗರದ ನೆಮ್ಮದಿ ಕುಟೀರ, ಸಿದ್ದಾಪುರ ತಾಲೂಕಿನ ಬಿಳಗಿ, ಹಲಗೇರಿ ಹಾಗೂ ಬಾಲಿಕೊಪ್ಪ, ಮುಂಡಗೋಡ ತಾಲೂಕಿನ ಜೋಡಿಕಟ್ಟಾ ಗ್ರಾಮ, ಯಲ್ಲಾಪುರ ತಾಲೂಕಿನ ಕಂಪ್ಲಿ (ಮಂಚಿಕೇರಿ), ಹಾಗೂ ಉಚಗೇರಿ, ದಾಂಡೇಲಿ ತಾಲೂಕಿನ 3ನಂ ಗೇಟ್, ಜೇನ್ ರೋಡ್, ಮೌಳಂಗಿ ಗ್ರಾಮ, ಮೃತ್ಯುಂಜಯ ಮಠ, ಸೋಮಾನಿ ಸರ್ಕಲ್, ಹಳಿಯಾಳ ತಾಲೂಕಿನ ಜನಗಾ ಗ್ರಾಮಗಳಲ್ಲಿ ವಿವಿಧ ತಂಡಗಳ ರೂಪದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 1900ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ತಲಾ 5 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಕ್ರಾಫ್ಟ್, ಚಿತ್ರಕಲೆ, ಕ್ಲೇ-ಮಾಡಲಿಂಗ್, ಕರಾಠೆ, ಡ್ಯಾನ್ಸ್, ಭಜನೆ, ಅಭಿನಯ ಗೀತೆ, ಆರೋಗ್ಯದ ಕುರಿತು ಮಾಹಿತಿ, ಸ್ಪೋಕನ್ ಇಂಗ್ಲೀಷ್, ವ್ಯಾಯಾಮ ಹಾಗೂ ಮನರಂಜನೀಯ ಕ್ರೀಡೆಗಳ ಆಯೋಜಿಸಲಾಗಿತ್ತು. ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಈ ಶಿಬಿರ ಸಾಕ್ಷಿಯಾಗಿದೆ ಎಂದು ಸಂಸ್ಥೆಯು ತಿಳಿಸಿದೆ.