Slide
Slide
Slide
previous arrow
next arrow

ನವರಾತ್ರಿ ದುರ್ಗಾ ದೌಡ್’ಗೆ ಚಾಲನೆ: ಬೃಹತ್ ಬೈಕ್ ಜಾಥಾ ಯಶಸ್ವಿ

300x250 AD

ಹಳಿಯಾಳ: ಧರ್ಮ ರಕ್ಷಣೆ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ(ದಸರಾ) ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಹಳಿಯಾಳ ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ನಡೆಯುವ ‘ದುರ್ಗಾ ದೌಡ್’ ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಶನಿವಾರ ಬೃಹತ್ ಬೈಕ್ ಜಾಥಾ ಯಶಸ್ವಿಯಾಗಿ ನಡೆಯಿತು.

ಶ್ರೀ ಶಿವ ಪ್ರತಿಷ್ಠಾನ, ದುರ್ಗಾದೌಡ ಸಮೀತಿ ಹಾಗೂ ವಿವಿಧ ಹಿಂದೂ ಸಂಘಟನೆಯವರ ಸಂಯುಕ್ತಾಶ್ರಯದಲ್ಲಿ ವಿಜೃಂಭಣೆಯಿ0ದ ನಡೆಯಲಿರುವ ದುರ್ಗಾದೌಡ ಅಂಗವಾಗಿ ಹಿಂದೂ ಸಮಾಜ ಬಾಂಧವರು, ವಿವಿಧ ಹಿಂದೂ ಸಂಘಟನೆಯವರು ನೂರಾರು ಸಂಖ್ಯೆಯ ಬೈಕ್‌ಗಳಲ್ಲಿ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಯುವಕರು ಭಗವಾ ಧ್ವಜಗಳೊಂದಿಗೆ ಶ್ರೀ ಗಣೇಶ ದೇವಸ್ಥಾನದ ಎದುರು ಸೇರಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ(ಜಾಥಾ) ಪ್ರಾರಂಭಿಸಿ ಪಟ್ಟಣದ ಪ್ರಮುಖ ಎಲ್ಲಾ ಬೀದಿಗಳಲ್ಲಿ ಸಂಚರಿಸಿದರು.

ದುರ್ಗಾಮಾತಾ ಕೀ ಜೈ ಶಿವಾಜಿ ಮಹಾರಾಜ ಕೀ ಜೈ ಜೀಜಾಮಾತಾ ಕೀ ಜೈ ಸೇರಿದಂತೆ ವಿವಿಧ ಘೋಷಣೆಗಳನ್ನು ಮೊಳಗಿಸಿದ ರ್ಯಾಲಿಯಲ್ಲಿ ಭಾಗವಹಿಸಿದರು ದಿ.15 ಭಾನುವಾರದಿಂದ ಆರಂಭವಾಗುವ ದುರ್ಗಾದೌಡ ಕುರಿತು ಜಾಗೃತಿ ಮೂಡಿಸಿದರು. ವಿಶೇಷ ಪೋಲಿಸ್ ಬಂದೋಬಸ್ತನಲ್ಲಿ ಯಾವುದೇ ಅವಘಡಗಳು ನಡೆಯದಂತೆ ಬೈಕ್ ಜಾಥಾ ಯಶಸ್ವಿಯಾಗಿ ಸಂಪನ್ನಗೊOಡಿತು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯಜಿತ್ ಗಿರಿ, ಸಂತೋಷ್ ಘಟಕಾಂಬಳೆ, ಪ್ರಸಾದ ಹುಣಸವಾಡಕರ, ಶ್ರೀನಾಥ್ ದೊಡ್ಮನಿ, ಅನಿಲ ಮುತ್ನಾಳೆ ಶಾಂತಾ ಹೀರೆಕರ, ಅಶೋಕ್ ಬೆಳಗಾಂವಕರ, ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top