ಸಿದ್ದಾಪುರ: ಪ್ರತಿಯೊಬ್ಬರು ತಮ್ಮ ಸಮಾಜವನ್ನು ಪ್ರೀತಿಸುವ ಜತೆಗೆ ಉಳಿದ ಸಮುದಾಯಗಳನ್ನು ಗೌರವಿಸಬೇಕು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಇಲ್ಲಿಯ ಬದ್ರಿಯಾ ಜಾಮಿಯಾ ಮಸ್ಜಿದ್ ಆಡಳಿತ ಕಮಿಟಿ ವತಿಯಿಂದ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವಲ್ಲಿ ಸಹಕರಿಸಿದ ಜನತೆಗೆ ನಿಜವಾದ ಅಭಿನಂದನೆ ಸಲ್ಲಬೇಕು. ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರತಿಯೊಬ್ಬರು ತಮ್ಮ ಸಮಾಜವನ್ನು ಗೌರವಿಸಿ ಉಳಿದ ಸಮುದಾಯಗಳನ್ನು ಪ್ರೀತಿಸಬೇಕು. ಎಲ್ಲಾ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮುಸಲ್ಮಾನ ಬಾಂಧವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಅಂಜುಮನ್ ಇಸ್ಲಾಂ ಸಮಿತಿ ಕಾರ್ಯದರ್ಶಿ ಮುನಾವರ್ ಗುರಕಾರ್ ಪ್ರಾಸ್ತಾವಿಕ ಮಾತನಾಡಿ, ಎಲ್ಲರ ಕಷ್ಟಸುಖದಲ್ಲಿ ಶಾಸಕ ಭೀಮಣ್ಣ ನಾಯ್ಕ ಭಾಗಿಯಾಗುತ್ತಾರೆ. ಸಮಾಜದ ಮೂರು ಕಬರಸ್ತಾನ ಸುತ್ತ ಕಂಪೌ0ಡ್ ನಿರ್ಮಿಸಬೇಕು. ಸಮಾಜದ ಮುಖ್ಯ ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರಿಸಬೇಕು. ಅಪೂರ್ಣಗೊಂಡ ಶಾದಿಮಹಲಗೆ ಅನುದಾನ ದೊರಕಿಸಿಕೊಡಬೇಕು. ಶತಮಾನ ಪೂರೈಸಿರುವ ಉರ್ದು ಶಾಲೆ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದರು.
ಇದೇ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಬದ್ರಿಯಾ ಜಾಮಿಯಾ ಮಸ್ಜಿದ್ ಸಮಿತಿ ಮಾಜಿ ಅಧ್ಯಕ್ಷರಾದ ಅಬುಸಾಬ ಮೀರಾಸಾಬ ಗುರಕಾರ ಹಾಗೂ ಮಹಬೂಬಲಿ ಸಾಬ್ ಇವರನ್ನು ಸನ್ಮಾನಿಸಲಾಯಿತು.
ಬದ್ರಿಯಾ ಮಸಿದಿಯ ಮಾಜಿ ಅಧ್ಯಕ್ಷ ಖಾದರ ಬಾಷಾ ಪಕೀರ ಸಾಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅಂಜುಮನ್ ಇಸ್ಲಾಂ ಸಮಿತಿ ಕಾರ್ಯದರ್ಶಿ ಮುನಾವರ್ ಗುರಕಾರ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ರಿಯಾಜ್ ಹೊಸೂರ, ಬದ್ರಿಯಾ ಮಸಿದಿಯ ಮಾಜಿ ಅಧ್ಯಕ್ಷ ಬುಡನ ಸಾಬ್, ಸಮಾಜ ಸೇವಕ ಹನೀಫ್ ಮೈದಿನಖಾನ, ಬದ್ರಿಯಾ ಮಸಿದಿಯ ಅಧ್ಯಕ್ಷ ಅಬ್ದುಲ್ ಮುನಾಫ್ ಮರ್ದಾನಸಾಬ್, ಮರ್ಬೂಜ್ ಆಲಂ ಮತ್ತಿತರರು ಉಪಸ್ಥಿತರಿದ್ದರು. ಬದ್ರಿಯಾ ಮಸಿದಿಯ ಸದಸ್ಯ ಗುಲಾಬ್ ಸ್ವಾಗತಿಸಿದರು. ಅಸ್ಲಾಂ ನಿರೂಪಿಸಿದರು.