Slide
Slide
Slide
previous arrow
next arrow

ಮೀನುಗಾರಿಕೆ ಇಲಾಖೆ ಕಾರ್ಯವೈಖರಿ ವಿರುದ್ಧ ಮೀನುಗಾರರ ಆಕ್ರೋಶ

300x250 AD

ಅಂಕೋಲಾ: ಕುಮಟಾದ ಮೀನುಗಾರರ ಸಹಕಾರಿ ಸಂಘದ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟ ಆಶ್ರಯದಲ್ಲಿ ನಡೆದ ಮೀನುಗಾರರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಉಪಾಧ್ಯಕ್ಷರುಗಳ, ನಿರ್ದೇಶಕರುಗಳ ಸಭೆಯಲ್ಲಿ ಮೀನುಗಾರಿಕೆ ಇಲಾಖೆ ಕಾರ್ಯವೈಖರಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಸರ್ವಾನುಮತದಿಂದ ನಿರ್ಣಯಿಸಲಾಯಿತು ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರ ತಿಳಿಸಿದ್ದಾರೆ.

2014-15 ರಿಂದ 2021-22 ನವರೆಗಿನ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯ ಫಲಾನುಭವಿಗಳ ವಂತಿಕೆ ಮತ್ತು ಪೂರ್ಣ ಪ್ರಮಾಣದ ಅನುದಾನ ಇಲಾಖೆಯಿಂದಿ ಇದುವರೆಗೂ ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವ ಕುರಿತು ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿಯೇ ಕಾರಣ, ಸದರಿ ಇಲಾಖಾ ನಿರ್ಲಕ್ಷ್ಯದಿಂದ ಸದರಿ ಯೋಜನೆಯು ಕುಂಠಿತವಾಗಿದ್ದು ಫಲಾನುಭವಿಗಳು ಮರು ನೊಂದಾಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಕುರಿತು ಸಂಬ0ಧಪಟ್ಟವರಿಗೆ ಅಂತಿಮ ಮನವಿಯನ್ನು ನೀಡುವುದು, ಮನವಿ ನೀಡಿದ ಒಂದು ವಾರದೊಳಗಾಗಿ ಜಿಲ್ಲೆಯ ಆಯಾ ಮೀನುಗಾರ ಸಹಕಾರಿ ಸಂಘಗಳ ಫಲಾನುಭವಿಗಳ ಖಾತೆಗೆ ವಂತಿಕೆ ಮತ್ತು ಪೂರ್ಣ ಪ್ರಮಾಣದ ಅನುದಾನ ಜಮಾ ಮಾಡುವುದು ಮತ್ತು ಎಲ್ಲಾ ಮೀನುಗಾರ ಸಹಕಾರಿ ಸಂಘಗಳಿಗೆ ಜಮಾ ಆದ ಕುರಿತು ಅಧಿಕೃತ ಪತ್ರ ನೀಡಿವುದು. ತಪ್ಪಿದ್ದಲ್ಲಿ ಮುಂದಿನ ಹೋರಾಟದ ಕುರಿತು ರೂಪುರೇಷೆ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ಮೀನುಗಾರರ ಆಶೋತ್ತರಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಹಾಗೂ ಮೀನುಗಾರರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ನಮ್ಮ ಜಿಲ್ಲೆಯಿಂದ ವರ್ಗಾಯಿಸುವಂತೆ ಹಾಗೂ ಸದರಿ ಯೋಜನೆಯ ವಿಫಲತೆ ಕುರಿತು ಮಾನ್ಯ ಮೀನುಗಾರಿಕಾ ಸಚಿವರಿಗೆ ನಿಯೋಗವೊಂದು ಭೇಟಿ ಮಾಡಿ ಮನವರಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮತ್ಸ್ಯಾಶ್ರಯ ಯೋಜನೆ, ಬಡ್ಡಿರಹಿತ ಸಾಲ, ಬಂದರುಗಳ ಹೂಳೆತ್ತುವುದು ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಕುಮಟಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷರಾದ ಜೈ ವಿಠ್ಠಲ ಕುಬಾಲ ರವರು ಸದರಿ ಒಕ್ಕೂಟವು 2014 ರಲ್ಲಿ ಸ್ಥಾಪಿಸಲ್ಪಟ್ಟ ಒಕ್ಕೂಟವು ಮೀನುಗಾರರು ಸೇರಿದಂತೆ ಸಂಘಗಳ ಸಮಸ್ಯೆಗಳ ಕುರಿತು ಅಧಿಕಾರಿಗಳ ಜನಪ್ರತಿನಿಧಿಗಳ ಸರ್ಕಾರದ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಉಳಿತಾಯ ಮತ್ತು ಪರಿಹಾರ ಯೋಜನೆ ಇಷ್ಟರ ಮಟ್ಟಿಗೆ ಪರಿಹರಿಸುವಲ್ಲಿ ಒಕ್ಕೂಟದ ಪ್ರಯತನ್ನ ಅತೀ ಮುಖ್ಯ ಪಾತ್ರ ವಹಿಸಿದೆ ಎಂದು ನುಡಿದರು.

300x250 AD

ಸಭೆಯಲ್ಲಿ ಮೀನುಗಾರರ ಸಹಕಾರಿ ಸಂಘಗಳಾದ ಬೇಲೆಕೇರಿ, ಹಾರವಾಡ , ಕಣಗಿಲ್ , ಹಿಲ್ಲೂರ , ಬೆಳಂಬರ, ಮಿರ್ಜಾನ, ದುಬ್ಬನಸಸಿ, ಬೈಲೂರು, ಕುಮಟಾ, ಕಾಗಲ ಹೀಣಿ, ಮುದಗಾ, ಹುಬ್ಬಣಗೇರಿ, ಮಹಿಳಾ ಸಂಘ ಕುಮಟಾ, ಮಹಿಳಾ ಸಂಘ ಹೊನ್ನಾವರ,ನಂದನಗದ್ಧಾ ಕೋಡಿಭಾಗ ಮುಂತಾದ ಸಂಘಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ರಾಜು ಹರಿಕಂತ್ರ ಕಣಗೀಲ್ ಎಲ್ಲರನ್ನು ವಂದಿಸಿದರು.

Share This
300x250 AD
300x250 AD
300x250 AD
Back to top