ಕಾರವಾರ: ಶ್ರೀರೇಣುಕಾ ಎಲ್ಲಮ್ಮ ಪರಶುರಾಮ ದೇವಸ್ಥಾನ ಸುಂಕೇರಿಯಲ್ಲಿ ಅ.15ರ ಘಟಸ್ತಾಪನೆಯಿಂದ 24ರ ವಿಜಯದಶಮಿ ತನಕ ನವರಾತ್ರಿ ಉತ್ಸವ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ದಿನನಿತ್ಯ ಬೆಳಿಗ್ಗೆ ಅಭಿಷೇಕ, ಮಾಲಾರ್ಪಣೆ, ಭಕ್ತಾದಿಗಳ ಪೂಜೆ, ರಾತ್ರಿ 7ರಿಂದ 8 ಭಜನೆ, ತದನಂತರ ಮಹಾಪೂಜೆ, ಪ್ರಸಾದ ವಿತರಣೆ, ವಿಜಯದಶಮಿ ದಿವಸ ಬೆಳಿಗ್ಗೆ ಅಭಿಷೇಕ, ಮಾಲಾರ್ಪಣೆ, ದೇವಿಯ ಜೋಕಾಲಿ ಸೇವೆ, ಹೋಮ, ಪುಜೆ, ಸಂಜೆ ಪಲ್ಲಕ್ಕಿ, ಬನ್ನಿ ಪೂಜೆ, ದೇವಿಯ ದರ್ಶನ, ಹಾಗೂ ಮಹಾಪೂಜೆ ಪ್ರಸಾದ ವಿತರಣೆ, ಇತ್ಯಾದಿ ಕಾರ್ಯಕ್ರಮಗಳಲ್ಲಿ ಎಲ್ಲರೂ ಬಂದು ದೇವರ ಕ್ರಪೆಗೆ ಪಾತ್ರರಾಗಲು ದೇವಸ್ಥಾನ ಆಡಳಿತ ಮಂಡಳಿ ವಿನಂತಿಸಿದೆ.