Slide
Slide
Slide
previous arrow
next arrow

ರಾಜ್ಯ ಮಟ್ಟಕ್ಕೇರಿದ ಅಳ್ಳಂಕಿ ಪ್ರೌಢಶಾಲೆಯ ಪ್ರತಿಭೆ

300x250 AD

ಹೊನ್ನಾವರ: ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಒಳಗಿನ ಹುಡುಗರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಅಳ್ಳಂಕಿ ಪ್ರೌಢಶಾಲೆಯ ವರುಣ್ ಐತಿಹಾಸಿಕ ಸಾಧನೆ ಮೆರೆದಿದ್ದಾನೆ.

ಈ ಮೂಲಕ ದಶಕಗಳ ನಂತರ ಅಳ್ಳಂಕಿ ಪ್ರೌಢಶಾಲೆ ರಾಜ್ಯ ಮಟ್ಟದಲ್ಲಿ ಗೆಲುವಿನ  ಭರವಸೆ ಮೂಡಿಸಿದೆ. ಶಾಲೆಯಲ್ಲಿ ಕ್ರೀಡಾಂಗಣದ ಕೊರತೆಯ ನಡುವೆಯೂ ಉತ್ತಮ ಸಾಧನೆಗೈದ ಈ ಗ್ರಾಮೀಣ ಪ್ರತಿಭೆಯನ್ನು ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು, ಊರ ನಾಗರಿಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top