Slide
Slide
Slide
previous arrow
next arrow

ಅತಿಕ್ರಮಣದಾರರಿಗೆ ಕಂಟಕ ; 73,732 ಕುಟುಂಬಕ್ಕೆ ಒಕ್ಕಲೆಬ್ಬಿಸುವ ಆತಂಕ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅತಿಕ್ರಮಿಸಿರುವ ಕಂದಾಯ ಭೂಮಿ ಅರ್ಜಿ ಸಲ್ಲಿಸಿದವರಲ್ಲಿ 73 ಸಾವಿರಕ್ಕೂ ಮಿಕ್ಕಿ ಸಾಗುವಳಿದಾರರ ಅರ್ಜಿ ತೀರಸ್ಕಾರಗೊಂಡು, ಕಾನೂನು ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರೀಯೆಯಿಂದ ನಿರಾಶ್ರೀತರಾಗುವ ಭೀತಿಯನ್ನು ಏದುರಿಸುತ್ತಿದ್ದಾರೆ ಎಂದು ಭೂಮಿ ಹಕ್ಕು ಹೋರಾಟಗಾರರ ರವೀಂದ್ರ ನಾಯ್ಕ ಹೇಳಿದ್ದಾರೆ.

ವಾಸ್ತವ್ಯ ಮತ್ತು ಸಾಗುವಳಿಗಾಗಿ ಕಾಲಕಾಲಕ್ಕೆ ರಾಜ್ಯ ಸರಕಾರ ಭೂ ಕಂದಾಯ ತಿದ್ದುಪಡಿ ಮಾಡಿ, ಕಂದಾಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ನೀಡುವ ಉದ್ದೇಶದಿಂದ, ಕಂದಾಯ ಅತಿಕ್ರಮಣದಾರರಿಂದ ವಿವಿಧ ಉದ್ದೇಶದ ಅಡಿಯಲ್ಲಿ 82,135 ಅರ್ಜಿ ಸ್ವೀಕರಿಸಿದ್ದು, ಅವುಗಳಲ್ಲಿ ಕಂದಾಯ ಅತಿಕ್ರಮಣದಾರರ 73,732 ಅರ್ಜಿಗಳು ತೀರಸ್ಕಾರವಾಗಿದ್ದು, ಕೇವಲ 6,489 ಕಂದಾಯ ಅತಿಕ್ರಮಣದಾರರಿಗೆ ಮಾತ್ರ ಸಕ್ರಮಗೊಳಿಸಿ ಮಂಜೂರಿ ನೀಡಲಾಗಿದೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಡಿಸೆಂಬರ್, 2021 ರಂದು ಪ್ರಕಟಿಸಿದ ಅಂಕೆ-ಸ0ಖ್ಯೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೂ ಕಂದಾಯ ಕಾಯಿದೆ ಅಡಿಯಲ್ಲಿ ವಿವಿಧ ನಮೂನೆಯ ನಂಬರಿನ ಅರ್ಜಿಯನ್ನು ನಗರ, ಗ್ರಾಮೀಣ, ಕಂದಾಯ ಭೂಮಿ ಅತಿಕ್ರಮಣದಾರರು ವಾಸ್ತವ್ಯ ಮತ್ತು ಸಾಗುವಳಿಯ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ಅವರು ಹೇಳಿದರು.

ಶೇ. 89.8 ಕಂದಾಯ ಅತಿಕ್ರಮಣದಾರರ ಅರ್ಜಿ ತೀರಸ್ಕಾರ:
ಜಿಲ್ಲೆಯಲ್ಲಿ ಕಂದಾಯ ಅತಿಕ್ರಮಣದಾರರ ಭೂಮಿ ಮಂಜೂರಿಗೆ ಸಂಬ0ಧ ಪಟ್ಟ0ತೆ, ಬಂದ0ತಹ ಅರ್ಜಿಗಳಲ್ಲಿ ಕೇವಲ 6,489 ಕಂದಾಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ದೊರಕಿದ್ದು, ಶೇ 89.8 ರಷ್ಟು ಕಂದಾಯ ಅತಿಕ್ರಮಣದಾರರ ಅರ್ಜಿ ತೀರಸ್ಕಾರವಾಗಿ ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಒಳಗಾಗುವ ಭೀತಿಯಲ್ಲಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

300x250 AD

ಕರ್ನಾಟಕ ಭೂ ಕಂದಾಯ ಕಾಯಿದೆ 1994 ರ ಅಡಿಯಲ್ಲಿ ಭೂಮಿ ಮಂಜೂರಿಗೆ ಅರ್ಜಿ ಸಲ್ಲಿಸಿದ ಡಿ.2021 ಕ್ಕೆ ಇರುವ ಸ್ಥಿತಿ-ಗತಿಯ ನೋಟ:
94 ಏ (ನಮೂನೆ -50) 39,016 1,661 37,355
94 ಸಿಸಿ (ನಗರ) (ನಮೂನೆ-50) 5,368 1,520 3,771
94 ಏ (4) (ನಮೂನೆ-57) 1,842 0 5
94 (ಸಿ) (ಗ್ರಾಮೀಣ) 9,651 2,508 7,143
94 ಬಿ (ನಮೂನೆ-53) 26,258 800 25,458
ಒಟ್ಟು 82,135 6,489 73,732

ಉತ್ತರ ಕನ್ನಡ ಜಿಲ್ಲೆಯ ಭೂ ಕಂದಾಯ ಕಾಯಿದೆ 1994 ರ ಅಡಿಯಲ್ಲಿ
ಭೂಮಿ ಮಂಜೂರಿಗೆ ಅರ್ಜಿ ಸಲ್ಲಿಸಿದ ಡಿಸೆಂಬರ್, 2021 ರ ಸ್ಥಿತಿ-ಗತಿಯ ನೋಟ.
ಮಂಜೂರಿ ಶೇಕಡವಾರು ಶೇಕಡವಾರು ತೀರಸ್ಕçತ ಒಟ್ಟು ವಿಲೇವಾರಿ
7.9% 89.8% 97.7%

Share This
300x250 AD
300x250 AD
300x250 AD
Back to top