Slide
Slide
Slide
previous arrow
next arrow

ಟೇಬಲ್ ಟೆನ್ನಿಸ್: ರಾಜ್ಯ ಮಟ್ಟಕ್ಕೆ ಸುಮುಖ ಆಯ್ಕೆ

300x250 AD

ಕುಮಟಾ: ಕಾರವಾರದಲ್ಲಿ ನಡೆದ 6ರಿಂದ 14 ವರ್ಷದೊಳಗಿನ ಪ್ರೌಢ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಟಿಜಿಟಿ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿ ಹೆಚ್.ಯು.ಸುಮುಖ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ವಿದ್ಯಾರ್ಥಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್, ಸಮನ್ವಯಾಧಿಕಾರಿ ರೇಖಾ ಸಿ.ನಾಯ್ಕ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ನಾಯಕ ಮತ್ತು ಸಿಬ್ಬಂದಿ ವರ್ಗದವರು ಪ್ರೌಢಶಾಲೆಯ ಮುಖಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

300x250 AD

ಈತನು ಕುಮಟಾ ಸ್ಪೋರ್ಟ್ಸ್ ಹೌಸ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ತರಬೇತುದಾರರಾದ ನವೀನ್ ನಾಯ್ಕ, ಸುನಿಲ ನಾಯ್ಕ, ಎನ್.ಜಿ.ಭಟ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸುಮುಖ, ಶಿಕ್ಷಕ ದಂಪತಿ ಭಾರತಿ ಮತ್ತು ಉಮೇಶ್ ನಾಯ್ಕ ಅವರ ಪುತ್ರನಾಗಿದ್ದಾನೆ.

Share This
300x250 AD
300x250 AD
300x250 AD
Back to top