ಕುಮಟಾ: ತಾಲೂಕಿನ ಮಿರ್ಜಾನ್ ಗ್ರಾಮ ಪಂಚಾಯತ್‌ನಲ್ಲಿ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತ ಚಿಕ್ಕಬಳ್ಳಾಪುರ ತಾಲ್ಲೂಕು ಬಾಗೇಪಲ್ಲಿ ಗ್ರಾ.ಪಂ ಮಿಟ್ಟೇಮರಿ ಅ.ನ.ಸಾ.ರಾ. ಗ್ರಾ.ಪಂ ಸಂಸ್ಥೆ ಮೈಸೂರು ಇವರು ಸಹಯೋಗದಲ್ಲಿ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮವು ಮಿರ್ಜಾನ ಗ್ರಾ.ಪಂದಲ್ಲಿ ಜರುಗಿತು.
ಮಟ್ಟೆಮರಿ ಗ್ರಾ.ಪಂ ಅಧ್ಯಕ್ಷ ಮಾತನಾಡಿ, ಗಾಂಧಿ ಪುರಸ್ಕಾರ ಪ್ರಶಸ್ತಿ ಎರಡೂ ಪಂಚಾಯತಕ್ಕೂ ದೊರಕಿದೆ. ಈ ಗ್ರಾ.ಪಂ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ನಮ್ಮ ಗ್ರಾ.ಪ ಇನ್ನಷ್ಟು ಅಭಿವೃದ್ಧಿ ಪಡಿಸಲು ಇಲ್ಲಿನ ಧನಾತ್ಮಕ ಅಂಶಗಳನ್ನು ಅಧ್ಯಯನ ಮಾಡುವುದಾಗಿ ತಿಳಿಸಿದರು. ನಮ್ಮಲ್ಲಿ ನರೇಗಾ ಕೆಲಸ ಜಾಸ್ತಿ ನಡೆಯುತ್ತಿದೆ ಈ ಕಡೆ ಕಡಿಮೆ ಮಿಟ್ಟೆಮರಿ ಗ್ರಾ.ಪಂ. ಪಿಡಿಓ ಸರಕಾರದ ಕ್ಷೇತ್ರ ಕಲಿಕಾ ಭೇಟಿ ಕಾರ್ಯಕ್ರಮದ ಆದೇಶದಂತೆ ಈ ಕಾರ್ಯಕ್ರಮ ನಡೆಯುತ್ತಿದ್ದು ಈ ಗ್ರಾ.ಪಂ. ದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಹಾಗೂ ತಮ್ಮ ಗ್ರಾ.ಪ ಎಷ್ಟು ಅಭಿವೃದ್ಧಿಯಾಗಿದೆಯೆಂಬುದನ್ನು ತುಲನೆ ಮಾಡಿ ಚರ್ಚಿಸಿದ್ದಾಗಿ ತಿಳಿಸಿದ್ದು, ಇಲ್ಲಿನ ಉತ್ತಮ ಅಂಶ ನಮ್ಮಲ್ಲಿ ಅಳವಡಿಸಿಕೊಳ್ಳಲು ಹಾಗೂ ನಮ್ಮಲ್ಲಿನ ಉತ್ತಮ ಅಂಶ ಇಲ್ಲಿ ಅಳವಡಿಸಿಕೊಳ್ಳಲು ಈ ಕಾರ್ಯಕ್ರಮ ಉಪಯುಕ್ತವಾಗಿದೆಯೆಂದು ಅಭಿಪ್ರಾಯಪಟ್ಟರು.
ಮಿರ್ಜಾನ ಗ್ರಾ.ಪಂ. ಪಿ.ಡಿಓ ಅಮೃತಾ ಭಟ್ಟ, ಅಧ್ಯಕ್ಷೆ ಜೋಸ್ಟಿನ್ ಡಿಸೋಜಾ, ಉಪಾಧ್ಯಕ್ಷ ಮಂಜುನಾಥ ಹರಿಕಾಂತ, ಸದಸ್ಯರಾದ ಗಣೇಶ ಅಂಬಿಗ, ಪರ್ಸು ಪರ್ನಾಂಡೀಸ್, ನಾಗರಾಜ ನಾಯ್ಕ ಇತರರು ಪಾಲ್ಗೊಂಡಿದ್ದರು.