Slide
Slide
Slide
previous arrow
next arrow

ಬೀರಾ ಬೋರಕರಗೆ ಅಭಿನಂದನೆ

300x250 AD

ಅಂಕೋಲಾ: ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಲಾಯನ್ಸ್ ಸೇವಾ ಟ್ರಸ್ಟಿನ ಹಿರಿಯ ಸದಸ್ಯ ಮತ್ತು ಅಂಕೋಲಾ ಸಿಟಿ ಲಾಯನ್ಸಿನ ಸಕ್ರಿಯ ಸದಸ್ಯ ಬೀರಾ ಇ.ಬೋರಕರ ಅವರನ್ನು 81ನೇ ಜನ್ಮದಿನದ ನಿಮಿತ್ತ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆ ವಹಿಸಿದ ಸಿಟಿ ಲಯನ್ಸ್ ಅಧ್ಯಕ್ಷ ಡಾ.ವಿಜಯದೀಪ ಮಣಿಕೋಟ ಸನ್ಮಾನಿಸಿ ಮಾತನಾಡುತ್ತ, ಸನ್ಮಾನಿತರು ತಾನು ಎನ್ನುವ ಅಹಂ ಇಲ್ಲದೇ ಎಲ್ಲರೊಳಗೆ ಒಂದಾಗಿ ಬೆರೆಯುವ ಸ್ನೇಹಮಯಿ. ಮನುಷ್ಯನಿಗೆ ಸೇವಾ ಮನೋಭಾವ ಇದ್ದಾಗ ಮಾತ್ರ ಸಮಾಜಕ್ಕೆ ಅವನಿಂದ ದಾನ, ಧರ್ಮ, ಆತ್ಮೀಯತೆಯಂತಹ ಗುಣ ನಿರೀಕ್ಷಿಸಬಹುದು. ಅಂತಹ ಗುಣಗಳ ಸಂಗಮ ಬಿ.ಇ.ಬೋರಕರ ಅವರನ್ನು ಸನ್ಮಾನಿಸುವುದು ನನಗೆ ದೊರೆತ ಅಪರೂಪದ ಅವಕಾಶ. ತಮ್ಮ ಸಮಾಜಮುಖಿ ಕಾರ್ಯಗಳು ಲಯನ್ಸ್ ಸಂಸ್ಥೆಗೆ ಇನ್ನಷ್ಟು ಬಲ ತುಂಬಲಿ. ಶ್ರೀಯುತರು ಶತಾಯುಷಿಗಳಾಗಿ ಯುವಕರಿಗೆ ಮತ್ತು ಸಮಾಜಕ್ಕೆ ಮಾರ್ಗದರ್ಶಿಗಳಾಗಲಿ ಎಂದರು.

ಕೇಕ್ ಕತ್ತರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಇ.ಬೋರಕರ, ತಾನು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅರಣ್ಯ ಇಲಾಖೆಯ ಅಧೀಕ್ಷಕನಾಗಿ ಸೇವೆ ಆರಂಭಿಸಿದ ನನಗೆ ನನ್ನೆಲ್ಲ ಆತ್ಮೀಯರ ಹಿತೈಶಿಗಳ ಹಾರೈಕೆ, ಭಗವಂತನ ಕೃಪೆ ಮತ್ತು ಲಯನ್ಸ್ನಂತಹ ಸೇವಾ ಸಂಸ್ಥೆಯ ಒಡನಾಟದಿಂದ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ನಿವೃತ್ತಿಯ ನಂತರ ಐಯರ್‌ಲ್ಯಾಂಡ್, ಸಿಂಗಾಪುರ, ಮಲೇಶಿಯಾದಂತಹ ದೇಶಗಳಿಗೆ ಸುತ್ತಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದೇನೆ. ನನ್ನ ದೀರ್ಘಾಯುಷ್ಯದ ಗುಟ್ಟು ಎಂದರೆ ಜೀವನದಲ್ಲಿ ಖುಷಿಯಾಗಿರಬೇಕು ಅಂದರೆ ಬಂದಂತೆ ಬದುಕಬೇಕು, ನುಡಿದಂತೆ ನಡೆಯಬೇಕು, ನಮ್ಮ ವಾದ ಸರಿಯಿದ್ದರೂ ಸುಮ್ಮನಾಗಿರಬೇಕು. ಮನಸ್ಸಿನಲ್ಲಿ ನೋವಿದ್ದರೂ ಮುಖದಲ್ಲಿ ಮಂದಹಾಸವಿರಬೇಕು. ಸೋತರೂ ಮರಳಿ ಯತ್ನವ ಮಾಡಬೇಕು ಎಂಬ ಮೂಲ ಮಂತ್ರ ನನ್ನದಾಗಿದೆ ಎಂದು ವಿನಮೃವಾಗಿ ನುಡಿದರು.

300x250 AD

ವೇದಿಕೆಯಲ್ಲಿ ಸಿಟಿ ಲಯನ್ಸ್ ಅಧ್ಯಕ್ಷರು, ಕಾರ್ಯದರ್ಶಿ ಪ್ರದೀಪ ರಾಯ್ಕರ, ಖಜಾಂಚಿ ಉದಯಾನಂದ ನೇರಲಕಟ್ಟೆ ಇದ್ದರು. ಮೋಹನ ಶೆಟ್ಟಿ ಕಾರ್ಯಕ್ರಮ ನಿರ್ವಹಣೆ, ಪ್ರದೀಪ ರಾಯ್ಕರ ಆಭಾರ ಮನ್ನಣೆ ಮಾಡಿದರು. ಸಮಾರಂಭದಲ್ಲಿ ಕಮಲಾಕರ ಬೋರಕರ, ಜಯಲಕ್ಷ್ಮಿ ಶೆಟ್ಟಿ, ಪ್ರಿಯಾ ರಾಯ್ಕರ, ಎನ್.ಎಚ್.ನಾಯ್ಕ, ಸುರೇಶ ಡಿ.ನಾಯ್ಕ, ನೀತಾ ಮಹಾಲೆ, ಅಶ್ವಿನಿ ಸಾಮಂತ, ಮಂಜುನಾಥ ಹಿರೇಮಠ, ಕೃಷ್ಣಾನಂದ ಶೆಟ್ಟಿ, ಮಾಯಾ ಶೆಟ್ಟಿ, ನಾಗರಾಜ ಮಹಾಲೆ, ರೋಶ್ನಾ ವಿಜಯದೀಪ, ಗಣಪತಿ ಹೆಗಡೆ, ವಿಜಯಲಕ್ಷ್ಮಿ ಭಟ್ಟ, ಶಶಿಧರ ಶೇಣ್ವಿ, ಡಾ.ಆರ್.ಪಿ.ಶರ್ಮಾ, ಭಾರತಿ ನಾಯಕ, ಆರ್.ಪಿ.ಶರ್ಮಾ, ಡಾ.ಪ್ರಕಾಶ ಜಾಖರ, ಶಿವಾನಂದ ಶೆಟ್ಟಿ, ಅರ್ಬನ್ ಬ್ಯಾಂಕ್ ಜನರಲ್ ಮ್ಯಾನೇಜರ್ ರವೀಂದ್ರ ವೈದ್ಯ ಮತ್ತು ಅವರ ಅಭಿಮಾನಿಗಳು ಭಾಗವಹಿಸಿದರು.

Share This
300x250 AD
300x250 AD
300x250 AD
Back to top