Slide
Slide
Slide
previous arrow
next arrow

ಸಂಕಲ್ಪ ಸಪ್ತಾಹ- ಸಮೃದ್ಧಿ ದಿನಾಚರಣೆ

300x250 AD

ಮುಂಡಗೋಡ: ಎನ್‌ಆರ್‌ಎಲ್‌ಎಮ್ ಸಂಜೀವಿನಿ ಯೋಜನೆಯ ತಾಲೂಕಿನ 16 ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಲ್ಲಿ ಹಾಗೂ ಸ್ವ-ಸಹಾಯ ಸಂಘಗಳಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಸಂಕಲ್ಪ ಸಪ್ತಾಹದಡಿ ಸಮೃದ್ಧಿ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಸಿಕ ಸಂತೆ, ಮಹಿಳೆಯರ ಸಬಲೀಕರಣಕ್ಕಾಗಿ ಸ್ವ-ಉದ್ಯೋಗ, ಆರ್ಥಿಕ ಸಾಕ್ಷರತೆ, ಆರೋಗ್ಯ, ಬ್ಯಾಂಕುಗಳ ವ್ಯವಹಾರದ ಕುರಿತು ಮಾಹಿತಿ, ಪಿ.ಎಮ್ ವಿಶ್ವಕರ್ಮ ಯೋಜನೆಯಲ್ಲಿ ಫಲಾನುಭವಿ ಸದಸ್ಯರ ನೊಂದಣಿ, ಸ್ವ-ಸಹಾಯ ಸಂಘದವರು ಉತ್ಪಾದಿಸಿದ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮತ್ತು ಸರ್ಕಾರದ ಇತರೆ ಯೋಜನೆಗಳ ಮಾಹಿತಿಯನ್ನು ನೀಡಲಾಯಿತು.

300x250 AD

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು, ಅಂಚೆ ಕಛೇರಿಯ ಸಿಬ್ಬಂದಿ, ಕೆನರಾ ಆರ್‌ಸೆಟಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವಿವಿಧ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯಶಸ್ವಿ ಉದ್ಯಮಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಹಲವಾರು ಮಹಿಳಾ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಎಮ್‌ಬಿಕೆ, ಎಲ್‌ಸಿಆರ್‌ಪಿ, ಕೃಷಿ ಸಖಿ, ಪಶು ಸಖಿ, ಕೃಷಿ ಉದ್ಯೋಗ ಸಖಿಯವರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top