Slide
Slide
Slide
previous arrow
next arrow

ಸರಸ್ವತಿ ಪಿಯು ವಿದ್ಯಾರ್ಥಿಗಳು ಸ್ವಿಮ್ಮಿಂಗ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

300x250 AD

ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು ಶಿರಸಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ, ವಿವಿಧ ವಿಭಾಗಗಳಲ್ಲಿ ಜಯಗಳಿಸಿ, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗುವುದರೊಂದಿಗೆ ಕಾಲೇಜಿನ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ಸ್ವಯಂ ಪೈ 50ಮೀ ಪ್ರೀಸ್ಟೈಲ್‌ನಲ್ಲಿ, 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ, 100ಮೀ ಪ್ರೀಸ್ಟೈಲ್‌ನಲ್ಲಿ ಪ್ರಥಮ ಸ್ಥಾನ ಹಾಗೂ 50ಮೀ × 4 ರೀಲೆಯಲ್ಲಿ ಪ್ರಥಮ ಸ್ಥಾನ, ರಾಘವೇಂದ್ರ 200ಮೀ ಪ್ರೀಸ್ಟೈಲ್‌ನಲ್ಲಿ ಪ್ರಥಮ ಸ್ಥಾನ, 50ಮೀ ಪ್ರೀಸ್ಟೈಲ್‌ನಲ್ಲಿ, 50ಮೀ‌ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ, ದ್ವಿತೀಯ ಸ್ಥಾನ ಹಾಗೂ 50ಮೀ‌× 4 ರೀಲೆಯಲ್ಲಿ ಪ್ರಥಮ ಸ್ಥಾನ, ದಿಕ್ಷೀತ ನಾಯ್ಕ 50ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ ಹಾಗೂ 50ಮೀ × 4 ರೀಲೆಯಲ್ಲಿ ಪ್ರಥಮ ಸ್ಥಾನ, ಅಕ್ಷತಾ 50ಮೀ ಪ್ರೀಸ್ಟೈಲ್‌ನಲ್ಲಿ, 50ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ, 100ಮೀ ಪ್ರೀಸ್ಟೈಲ್‌ನಲ್ಲಿ ಪ್ರಥಮ ಸ್ಥಾನ, ಶ್ರೇಯಾ ನಾಯ್ಕ 50ಮೀ ಪ್ರೀಸ್ಟೈಲ್‌ನಲ್ಲಿ, 50ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ, 100ಮೀ ಪ್ರೀಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕಾಲೇಜಿನ ಹಾಗೂ ಕುಮಟಾ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕರಾದ ಪದ್ಮನಾಭ ಪ್ರಭು, ಅವಿನಾಶ ಅಮ್ಮನಗಿ, ತ್ರಿವೇಣಿ ನಾಯ್ಕ, ಉಪನ್ಯಾಸಕ ಅಕ್ಷಯ ಹೆಗಡೆ, ದೈಹಿಕ ಶಿಕ್ಷಕ ದಿವಾಕರ ನಾಯ್ಕ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top