Slide
Slide
Slide
previous arrow
next arrow

ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಡಿಸಿಜಿ ಭೇಟಿ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಾರವಾರ ಕಚೇರಿಗೆ ಗೃಹರಕ್ಷಕದಳದ ಉಪ ಮಹಾ ಸಮಾದೇಷ್ಠ ಹಾಗೂ ಪೌರರಕ್ಷಣೆ ಉಪನಿರ್ದೇಶಕ ಅಕ್ಷಯ್ ಎಂ.ಹಾಕೆ ಭೇಟಿ ನೀಡಿ ಕಚೇರಿ ಕಡತಗಳನ್ನು ಪರಿಶೀಲಿಸಿದರು.

ಕಾಲ ಕಾಲಕ್ಕೆ ಗೃಹರಕ್ಷಕರಿಗೆ ಸೂಕ್ತ ಸಲಹೆ ತರಬೇತಿ ನೀಡಬೇಕು ಮತ್ತು ಅಗ್ನಿಶಾಮಕ ಮತ್ತು ಇತರೆ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಹಾಗೂಗೃಹರಕ್ಷಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸುವಂತೆ ಸಮಾದೇಷ್ಟರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪೌರ ರಕ್ಷಣಾ ಪಡೆಗಳನ್ನು ಇನ್ನಷ್ಟು ಮುನ್ನೆಲೆಗೆ ತರಲು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಸಮಾದೇಷ್ಟರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ. ಸಂಜು ತಿಮ್ಮಣ್ಣ ನಾಯಕ ಮತ್ತು ಜಿಲ್ಲಾ ಬೋಧಕ ರಘು ಬಿ.ಸಿ, ಕಚೇರಿಯ ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ ನಾಯಕ, ದ್ವಿತೀಯ ದರ್ಜೆ ಸಹಾಯಕಿ ಮಧು.ಹೆಚ್. ಹಾಗೂ ಇತರ ಗೃಹರಕ್ಷಕರು ಉಪಸ್ಥಿತರಿದ್ದರು.

300x250 AD

ಈ ಸಂದರ್ಭದಲ್ಲಿ ಅಧಿಕೃತವಾಗಿ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಗೌರವ ವಂದನೆಯನ್ನು ಡಿಸಿಜಿರವರರಿಗೆ ನೀಡಲಾಯಿತು.

Share This
300x250 AD
300x250 AD
300x250 AD
Back to top