ಸಿದ್ದಾಪುರ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ಜೇನುಕೃಷಿ ವಿಭಾಗದ ಮುಖ್ಯಸ್ಥ, ಮೂಲತಃ ತಾಲೂಕಿನ ಕೋಲಸಿರ್ಸಿಯ ಡಾ.ಮೋಹನ ನಾಯ್ಕ ರಚನೆಯ ‘Vertebrate pets in Agriculture landscape of Karnataka and There Eco friendly Management ‘ ಎಂಬ ಕೃಷಿ ಸಂಶೋಧನಾ ಕೃತಿ ಬಿಡುಗಡೆಗೊಂಡಿದೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ 58ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಕುಲಪತಿ ಡಾ.ಎಸ್.ವಿ.ಸುರೇಶ್ ಕೃತಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಡಾ.ಲಕ್ಷೀಪತಿ ಗೌಡ, ಡಾ.ಪ್ರಭಾಕರ ಶೆಟ್ಟಿ, ಡಾ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಮೋಹನ್ ನಾಯ್ಕರವರ ಕೃಷಿಸಂಶೋಧನಾ ಕಾರ್ಯಸಾಧನೆಯನ್ನು ಪ್ರಶಂಸಿಸಿದರು.
ಅಭಿನಂದನೆ: ಡಾ.ಮೋಹನ ನಾಯ್ಕ ಕೋಲಸಿರ್ಸಿ ಇವರ ಕೃತಿ ಸಾಧನೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ, ಕೋಶಾಧ್ಯಕ್ಷ ಪಿ.ಬಿ.ಹೊಸೂರು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ ಅಭಿನಂದಿಸಿದ್ದಾರೆ.