ಕುಮಟಾ: ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಿರ್ಮಿಸಲಾದ ಆಕರ್ಷಕ ಹೂವಿನ ಮಂಟಪ ಗಮನ ಸೆಳೆಯಿತು.
ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು. ದೇವಿಗೆ ಮಾಡಲಾದ ಪುಷ್ಪಾಲಂಕಾರ ಅತೀ ಸುಂದರವಾಗಿ ಕಾಣುತ್ತಿರುವುದರಿಂದ ಅಲಂಕಾರಭೂಷಿತ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಿಗೆ ಹಣ್ಣು-ಕಾಯಿ ಸೇವೆ ಸಲ್ಲಿಸಿದ ಭಕ್ತರು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಮುತೈದೆಯರು ದೇವಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ಸೇವೆ ಗೈದರು.
ಶ್ರೀಶಾಂತಿಕಾ ಡೇಕೊರೆಟರ್ಸ್ ಮತ್ತು ಶಾಂತಿಕಾ ಮಿತ್ರ ಮಂಡಳಿ ಮತ್ತು ಭಜಕ ಮಂಡಳಿಯ ಸಹಯೋಗದಲ್ಲಿ ಈ ಹೂವಿನ ಅಲಂಕಾರವನ್ನು ನಿರ್ಮಿಸಲಾಗಿತ್ತು. ಸಂಜೆ ನಡೆದ ಭಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ರಾತ್ರಿ ನಡೆದ ಮಹಾ ಮಂಗಳಾರತಿ ಪೂಜೆ ಅದ್ಧೂರಿಯಾಗಿ ಸಂಪನ್ನಗೊಡಿತು. ಬಳಿಕ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು.