Slide
Slide
Slide
previous arrow
next arrow

ಎಲೆ ಚುಕ್ಕೆ ರೋಗದ ಕುರಿತು ಮಾಹಿತಿ ಕಾರ್ಯಗಾರ

300x250 AD

ಶಿರಸಿ: ಜಿಲ್ಲಾ ರೈತ ಸಂಘ, ತಾಲೂಕು ರೈತ ಸಂಘ ಹಾಗೂ ಗ್ರಾಮಾಭಿವೃದ್ಧಿ ಸಂಘ ಕಂಡ್ರಾಜಿ ಸಂಯುಕ್ತ ಆಶ್ರಯದಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗದ ಕುರಿತು ತೋಟಗಾರಿಕಾ ಇಲಾಕೆ ಅಧಿಕಾರಿಗಳಿಂದ ಮಾಹಿತಿ ಕಾರ್ಯಗಾರ ನಡೆಸಲಾಯಿತು.

ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ ಡಾ.ಪ್ರಸಾದ, ರೈತರು ಎಲೆಚುಕ್ಕೆ ರೋಗದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ಮೊದಲಿನಿಂದ ಇದ್ದ ರೋಗ, ಈಗ ಹೆಚ್ಚಾಗಿದೆ. ವಾತಾವರಣದ ಏರು ಪೆರುನಿಂದ ಈಗ ಸ್ವಲ್ಪ ರೋಗ ಹೆಚ್ಚಾಗಿದೆ ರೈತರು ಮುನ್ನೆಚ್ಚರಿಕೆವಹಿಸಿದರೆ ರೋಗದಿಂದ ಯಾವುದೇ ತೊಂದರೆ ಇಲ್ಲ. ಮಳೆಗಾಲದಲ್ಲಿ ರೈತರು ಅಡಿಕೆಗೆ ಬೋಡೋಷಿಂಪಣಿ ಮಾಡುವಾಗ ಕೇವಲ ಅಡಿಕೆ ಗೋನಿಗೆ ಮಾತ್ರ ಸಿಂಪರಣೆ ಮಾಡದೆ ಅಡಿಕೆಯ ಮರಕು ಸಿಂಪರಣೆ ಮಾಡುವುದರಿಂದ ರೋಗ ನಿಯಂತ್ರಣ ಮಾಡಬಹುದು. ವಾತಾವರಣದಲ್ಲಿ ಅತಿಯಾದ ತೇವಾಂಶ ಹೆಚ್ಚಾದಾಗ ಈ ರೋಗವು ಹೆಚ್ಚಾಗುತ್ತದೆ ಎಂದರು.

ಈಗಾಗಲೇ ಸರ್ಕಾರದಿಂದ ಸ್ವಲ್ಪ ಸಹಾಯಧನವನ್ನು ನೀಡಿದ್ದು, ಅದರ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕಾಗಿದೆ. ಈಗಾಗಲೇ ಇಲಾಖೆಗೆ ಬಂದಂತಹ ರೈತರಿಗೆ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದು ರೈತರು ಸರಿಯಾದ ರೀತಿಯಲ್ಲಿ ಔಷಧ ಸಿಂಪರಣೆ ಮಾಡಿದರೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು. ರಾಜ್ಯದಲ್ಲಿ ಅತಿಯಾದ ಅಡಿಕೆ ಬೆಳೆ ವಿಸ್ತರಣೆಯೂ ಸಹ ಈ ರೋಗಕ್ಕೆ ಪೂರಕವಾದ ವಾತಾವರಣವಾಗಿದೆ. ಜೂನ್‌ನಿಂದ ಪ್ರಾರಂಭವಾದಂತ ಮಳೆಗಾಲ ಡಿಸೆಂಬರ್‌ವರೆಗೆ ನಿರಂತರವಾದ ಮಳೆ ಆಗುವುದು ರೋಗಕ್ಕೆ ಪೂರಕವಾದಂತ ವಾತಾವರಣವಾಗಿದೆ. ಔಷಧ ಸಿಂಪರಣೆಯನ್ನು ರೈತರು ಸಾಮೂಹಿಕವಾಗಿ ಮಾಡುವುದರಿಂದ ಸಂಪೂರ್ಣವಾದಂತ ನಿಯಂತ್ರಣವನ್ನು ಮಾಡಬಹುದು ಎಂದರು.

ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ ಮಾತನಾಡುತ್ತಾ. ರೈತರು ತೋಟಿಗಾರಿಕಾ ಇಲಾಖೆಯ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುವುದರಿಂದ ಹಾಗೂ ಅಧಿಕಾರಿಗಳ ಸಲಹೆ  ಸೂಚನೆ ಮೇರೆಗೆ ಔಷಧಿ ಸಿಂಪರಣೆ ಮಾಡುವುದರಿಂದ ರೋಗ ಹತೋಟಿಗೆ ತರಬಹುದು. ಎಲೆ ಚುಕ್ಕಿ ರೋಗ ಹಿಂದಿನಿಂದಲೂ ಇದ್ದಿದ್ದು ಆದರೆ ಈಗ ಅದರ ತೀವ್ರತೆ ಹೆಚ್ಚಾಗಿದೆ. ರೈತರು ತೋಟಗಳ ನಿರ್ವಹಣೆಯನ್ನು ಸರಿಯಾಗಿ ಮಾಡುವುದರ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ರೋಗ ಮುಕ್ತವಾಗಿ ಇಡಬಹುದು. ತೋಟಗಳಲ್ಲಿ ಸರಿಯಾದ ರೀತಿಯಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಬೇಕಿದೆ ಹಾಗೂ ಗೊಬ್ಬರಗಳು ನೀಡುವುದರ ಮೂಲಕ ಉತ್ತಮವಾದಂತ ಅಡಿಕೆ ಫಸಲನ್ನು ಪಡೆಯಬಹುದು. ಇಂದಿನ ಕಾರ್ಯಾಗಾರದಲ್ಲಿ ತಿಳಿಸಿದಂತೆ ಸರಿಯಾದ ರೀತಿಯಲ್ಲಿ ಔಷಧಿ ಸಿಂಪರಣೆಯನ್ನು ಮಾಡುವುದರ ಮೂಲಕ ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು ಎಂದರು.

300x250 AD

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ರೈತ ಸಂಘದ ತಾಲೂಕು ಕಾರ್ಯದರ್ಶಿ ಮಹೇಶ್ ಕೆ.ಎಂ., ಇಂದು ರೈತ ಸಂಘವು ರೈತರಿಗೆ ಅನುಕೂಲವಾಗಲೆಂದು ಎಲೆಚುಕ್ಕೆ ರೋಗದ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಸರಿಯಾಗಿ ಪಡೆದುಕೊಂಡು ಎಲೆಚ್ಚುಕೆ ರೋಗವನ್ನು ನಿಯಂತ್ರಿಸಬೇಕಿದೆ. ಕಳೆದ ಕೆಲವು ವರ್ಷಗಳ ಹಿಂದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗದ ಬಗ್ಗೆ ಕೇಳುತ್ತಿದ್ದ ನಾವು ಇಂದು ನಮ್ಮ ಜಿಲ್ಲೆಯಲ್ಲಿ ಅತಿಯಾದಂತಹ ರೋಗವನ್ನು ಕಾಣುತ್ತಿದ್ದೇವೆ ಈಗಲೇ ರೈತರು ಎಚ್ಚೆತ್ತುಕೊಂಡು ಎಲಚುಕ್ಕೆ ರೋಗದಿಂದ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಬೇಕಿದೆ. ಕಾರ್ಯಕ್ರಮದಲ್ಲಿ ಗಣೇಶ ಹೆಗಡೆ ತೋಟಗಾರಿಕಾ ಅಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಎಸ್‌ಎನ್ ಹೆಗಡೆ ದೊಡ್ಡನಳ್ಳಿ, ತಾಲೂಕು ರೈತ ಸಂಘದ ಅಧ್ಯಕ್ಷ ರಾಜೇಂದ್ರ ನಾಯ್ಕ ಕಾಯಗುಡ್ಡೆ, ಜಿಲ್ಲಾ ರೈತ ಸಂಘದ ಸದಸ್ಯರಾದ ಮದಲಿಂಗ ನಾಯ್ಕಅಂಡಗಿ, ಸುರೇಶ್ ನಾಯ್ಕ, ಹರೀಶ ನಾಯ್ಕ, ರಾಜೇಶ ನಾಯ್ಕ, ಮಧುಕೇಶ್ವರ, ನಾಯ್ಕ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top