Slide
Slide
Slide
previous arrow
next arrow

ಹೋರಾಟಗಾರ ರವೀಂದ್ರ ನಾಯ್ಕಗೆ ಎಂಪಿ ಟಿಕೆಟ್ ನೀಡಲು ಆಗ್ರಹ

300x250 AD

ಸಿದ್ದಾಪುರ: ರೈತ ಪರ, ಸಾಮಾಜಿಕ ಹೋರಾಟಗಾರ, ವಕೀಲ ರವೀಂದ್ರ ನಾಯ್ಕ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿ ಅಭ್ಯರ್ಥಿಯಾಗಿ ಮಾಡಬೇಕು ಎಂದು ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ರೈತ ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಆಗಿರುವ ವೀರಭದ್ರ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಯಾಬಿನೆಟ್ ಸಚಿವರನ್ನು ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿಗಳನ್ನಾಗಿ ಈಗಾಗಲೇ ನೇಮಕ ಮಾಡಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ನೇಮಿಸಲಾಗಿದೆ. ಇದೇ ಬರುವ 7ರಂದು ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಅಂಕೋಲಾದಲ್ಲಿ ಸಭೆಯನ್ನು ಕರೆದಿದ್ದಾರೆ. ಈಗಾಗಲೇ ಅನೇಕ ಜನ ಆಕಾಂಕ್ಷಿಗಳು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಕಳೆದ 35-40 ವರ್ಷಗಳಿಂದ ಇಡೀ ಜಿಲ್ಲೆಯಲ್ಲಿ ಸಾಮಾಜಿಕ ಕಳಕಳಿ ಹೊಂದಿರುವವರು, ರೈತ ಪರ ಒಲವು ಹೊಂದಿರುವ, ರೈತ ಪರ ಚಿಂತನೆಯನ್ನು ಹೊಂದಿರುವ ಹೋರಾಟಗಾರ ರವೀಂದ್ರ ನಾಯ್ಕ, ಸುಮಾರು 15 ವರ್ಷದ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಹ ಸ್ಪರ್ಧಿಸಿದ್ದರು. ತದನಂತರ ಸಹ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡು ಜನರೊಂದಿಗೆ ಇದ್ದಾರೆ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಅವರು ಪಕ್ಷದ ಅಭ್ಯರ್ಥಿಯಾಗಬೇಕೆಂದು ಪಕ್ಷದಲ್ಲಿ ಅರ್ಜಿ ಸಲ್ಲಿಸಿದ್ದರು. ಕೊನೆ ಹಂತದಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ. ಅವರು ಸ್ಪರ್ಧಿಸಲು ತಯಾರಿ ನಡೆಸಿದಾಗ ನೀವು ಈಗ ಚುನಾವಣೆಯಲ್ಲಿ ಭಾಗವಹಿಸಿದರೆ ಕಾಂಗ್ರೆಸ್ ಪಕ್ಷದ ಮತಗಳು ಒಡೆದು ಹೋಗುತ್ತವೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ನಿಮ್ಮೊಂದಿಗೆ ನಿಲ್ಲುತ್ತೇವೆ ಅಂತ ಅವರ ಮನವೊಲಿಸಿದ್ದೆವು. ಅವರು ಕೂಡ ಎಲ್ಲಾ ಕಡೆ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದಾರೆ. ಈಗ ಲೋಕಸಭೆ ಚುನಾವಣೆ ಬಂದಿರುವುದರಿ0ದ ಹಾಗೂ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದ ಎಚ್.ಕೆ.ಪಾಟೀಲರಿಗೆ ಮತ್ತು ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಒತ್ತಾಯ ಮಾಡುತ್ತೇನೆ. ಕೆನರಾ ಕ್ಷೇತ್ರದಿಂದ ರವೀಂದ್ರ ನಾಯ್ಕ ರವರಿಗೆ ಟಿಕೆಟ್ ಅನ್ನು ಕೊಡಬೇಕು ಎಂದು ನಾವೆಲ್ಲ ಸಮಾನ ಮನಸ್ಕರು ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಅವರ ಪರವಾಗಿ ನಿಲ್ಲುತ್ತೇವೆ. ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರುತ್ತೇವೆ ಎಂಬ ಒತ್ತಾಯವನ್ನು ಈ ಸಂದರ್ಭದಲ್ಲಿ ನಾವು ಮಾಡುತ್ತಿದ್ದೇವೆ ಎಂದರು.

300x250 AD

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸುರೇಶ ನಾಯ್ಕ ತೆಂಗಿನಮನೆ, ವಿನಾಯಕ ನಾಯ್ಕ ಕಾನಮನೆ, ಗೋವಿಂದ ಗೌಡ ಕಿಲವಳ್ಳಿ, ರಾಘವೇಂದ್ರ ನಾಯ್ಕ ಕವಂಚೂರು, ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಟಿ.ಎಚ್.ನಾಯ್ಕ,ದಿನೇಶ ನಾಯ್ಕ ಬೇಡ್ಕಣಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top