Slide
Slide
Slide
previous arrow
next arrow

ಶೌರ್ಯ ಜಾಗರಣ ರಥಯಾತ್ರೆ ಹೆಗಡೆಗೆ; ಭವ್ಯ ಸ್ವಾಗತ

300x250 AD

ಕುಮಟಾ: ವಿಶ್ವ ಹಿಂದೂ ಪರಿಷತ್- ಭಜರಂಗ ದಳದ ಶೌರ್ಯ ಜಾಗರಣ ರಥಯಾತ್ರೆ ತಾಲೂಕಿನ ಹೆಗಡೆಗೆ ಆಗಮಿಸುತ್ತಿದ್ದಂತೆ ಊರಿನ ವತಿಯಿಂದ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.

ರಥವು ಹೆಗಡೆಯ ಕಾನಮ್ಮ ದೇವಸ್ಥಾನ ದ ಹತ್ತಿರ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸ್ವಾಗತಿಸುವ ಮೂಲಕ ಶಾಂತಿಕಾ0ಬಾ ದೇವಾಲಯದ ತನಕ ರಥದೊಂದಿಗೆ ಮೆರವಣಿಗೆ ನಡೆಸಿದರು. ದೇವಾಲಯದ ಎದುರು ರಥ ಆಗಮಿಸಿದಾಗ ಗ್ರಾಮದ ಹೆಗಡೆಯವರಾದ ಹರಿಹರ ಹೆಗಡೆ, ದೇವಾಲಯದ ಮೊಕ್ತೆಶ್ವರ ರಾದ ನಾಗೇಶ ಶಾನಭಾಗ, ಮೊಕ್ತೆಶ್ವರ ಮಂಡಳಿಯ ಎಮ್ ಎಮ್ ನಾಯ್ಕ ಆಂಜನೇಯ ಮೂರ್ತಿಗೆ ಹೂಮಾಲೆ ಸಮರ್ಪಿಸಿ ವಂದಿಸಿದರು. ನಂತರ ದೇವಾಲಯದ ಮುಖ್ಯ ಅರ್ಚಕರಾದ ತಮ್ಮಣ್ಣ ಭಟ್ಟ ರವರು ಪೂಜೆ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್‌ನ ಉತ್ತರ ಕರ್ನಾಟಕದ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ರಥಯಾತ್ರೆ ಯ ಉದ್ದೇಶದ ಬಗ್ಗೆ ಹಾಗೂ ನಾವೆಲ್ಲ ಹಿಂದುಗಳು ಯಾಕೆ ಜಾಗೃತರಾಗುವ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಜೊತೆಗೆ ಉಪಸ್ಥಿತರಿದ್ದರು.

300x250 AD

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಆಶಾ ನಾಯ್ಕ, ಸದಸ್ಯ ರಾಮಚಂದ್ರ ಪಟಗಾರ, ವಿನೋದ ಪ್ರಭು, ವಿಶ್ವ ಹಿಂದೂ ಪರಿಷತ್ ನ ಸದಾನಂದ ಕಾಮತ್, ಪ್ರಶಾಂತ ನಾಯ್ಕ, ಮಹೇಶ ನಾಯ್ಕ, ಗ್ರಾಮಸ್ಥರಾದ ವಕೀಲ ವಿನಾಯಕ ಪಟಗಾರ, ಮೋಹನ ಶಾನಭಾಗ, ಮಂಜುನಾಥ ನಾಯ್ಕ, ದಾಮೋದರ ಪಟಗಾರ, ಪವನ ಪ್ರಭು ವೆಂಕಟೇಶ ನಾಯ್ಕ, ಅಮರನಾಥ ಭಟ್ಟ, ವಿವೇಕ ದಿವಾಕರ, ಗಣೇಶ ಶೇಟ್ ಮಹಿಳೆಯರು ಹಾಗೂ ಇತರ ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top